ಮುಂಬೈ: ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ತಮಿಳಿನ ನಟ ಇಳಯ ದಳಪತಿ ವಿಶೇಷ ಗೆಸ್ಟ್ ರೋಲ್ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಯಾವುದೇ ಸಂಭಾವನೆ ಪಡೆಯದೇ ಅಭಿನಯಸ್ತಿರೋದು ಈಗೀನ ವಿಶೇಷ.
ಹೌದು. ಇಳಯ ದಳಪತಿ ಈ ಚಿತ್ರದಲ್ಲಿ ಫ್ರೀಯಾಗಿಯೇ ಆಕ್ಟ್ ಮಾಡ್ತಿದ್ದಾರೆ. ಇದಕ್ಕೆ ಕಾರಣ, ಇಬ್ಬರು. ಒಬ್ಬರು ಮಿಸ್ಟರ್ ಶಾರುಖ್ ಖಾನ್. ಶಾರುಖ್ ಮೇಲಿನ ಅಭಿಮಾನಕ್ಕೆ ಈ ಚಿತ್ರದಲ್ಲಿ ನಟಿಸಿಲು ಒಪಿಕ್ಕೊಂಡಿದ್ದಾರೆ. ಇನ್ನೊಬ್ಬರು ಈ ಚಿತ್ರದ ನಿರ್ದೇಶಕ ಅಟ್ಲಿ. ನಿರ್ದೇಶಕ ಅಟ್ಲಿ ಮೇಲಿನ ಗೌರವಕ್ಕೆ ವಿಜಯ್ ಈ ಚಿತ್ರದ ರೋಲ್ ಮಾಡ್ತಿದ್ದಾರೆ.
ಶಾರುಖ್ ಖಾನ್ ಆಲ್ ಮೋಸ್ಟ್ ಪ್ಲಾಪ್ ಆಗಿಯೇ ಬಿಟ್ಟಿದ್ದಾರೆ. ಈ ಸಲ ಗೆಲ್ಲಲೇಬೇಕು ಅಂತಲೇ ಸೌಥ್ ಕಡೆಗೆ ಬಂದು ಬಿಟ್ಟಿದ್ದಾರೆ. ಬಾಲಿವುಡ್‌ನ ಜವಾನ್ ಚಿತ್ರದಲ್ಲಿ ಸೌಥ್ ಇಂಡಿಯಾ ಕಲಾವಿದರೇ ಇದ್ದಾರೆ. ಟೆಕ್ನಿಷನ್‌ಗಳೂ ಇಲ್ಲಿಯವರೇ ಇರೋದು ವಿಶೇಷ. ಉಳಿದಂತೆ ಸದ್ಯಕ್ಕೆ ಇಷ್ಟೇ.ಬಾಕಿ ಮಾಹಿತಿಗಾಗಿ ವೇಟ್ ಮಾಡಿ.
PublicNext
13/07/2022 11:09 am