ದುಬೈ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ-777 ಚಿತ್ರ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿದೆ. ಈಗ ಇದೇ ಚಿತ್ರ ದುಬೈನಲ್ಲೂ ರಿಲೀಸ್ ಆಗಿ ಸಕ್ಸಸ್ ಸಂಭ್ರಮ ಆಚರಿಸಿಕೊಂಡಿದೆ.
ಅದರ ಒಂದಷ್ಟು ಫೋಟೋಗಳೂ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದುಬೈನಲ್ಲಿ ನಡೆದ ಈ ಸಕ್ಸಸ್ ಸಂಭ್ರಮದಲ್ಲಿ ಚಾರ್ಲಿ ಇಡೀ ಟೀಮ್ ಭಾಗಿ ಆಗಿತ್ತು. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ,ನಾಯಕಿ ಸಂಗೀತಾ ಶ್ರೀಂಗೇರಿ,ಡೈರೆಕ್ಟರ್ ಕಿರಣ್ ರಾಜ್ ಕೆ. ಎಲ್ಲರೂ ಈ ಒಂದು ಖುಷಿಯಲ್ಲಿ ಹಾಜರಿದ್ದರು.
PublicNext
29/06/2022 02:13 pm