ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬದುಕು ವಿಶೇಷವಾಗಿಯೇ ಇದೆ. ವೃತ್ತಿ ಬದುಕಿನಲ್ಲಿ ಏನೆಲ್ಲ ಆಗಿದೆ ಅನ್ನೋದು ಗೊತ್ತೇ ಇದೆ. ಆದರೆ, ಈಗ ಇದೇ ರೋಹಿಣಿ ಸಿಂಧೂರಿ ಅವರ ಬದುಕು ಕಿರುತೆರೆಯಲ್ಲಿ ಬರ್ತಿದೆ ಅನ್ನೋ ಮಾತು ಸದ್ಯ ಕೇಳಿ ಬರುತ್ತಿದೆ.
ಹೌದು. ಈ ಒಂದು ಅನುಮಾನ ಮೂಡಲು ಕಾರಣವೂ ಇದೆ. ರೋಹಿನಿ ಸಿಂಧೂರಿ ಅವರ ವೇಷ-ಭೂಷಣ ಹೋಲುವ ಒಂದು ಕ್ಯಾರೆಕ್ಟರ್ ಈಗ ಪುಟ್ಟ ಪರದೆಯ ಧಾರವಾಹಿಗಾಗಿಯೇ ರೆಡಿ ಆಗಿದೆ. ದಿವ್ಯಾ ಕಾರಂತ ಈ ಒಂದು ರೋಲ್ ಅನ್ನ ನಿಭಾಯಿಸುತ್ತಿದ್ದಾರೆ.
ನಟ-ನಿರ್ದೇಶಕ ಎಸ್.ಎನ್.ಸೇತುರಾಮ್ ನಿರ್ದೇಶನದ ಈ ಧಾರವಾಹಿಗೆ ಯುಗಾಂತರ ಅಂತಲೇ ಹೆಸರಿಡಲಾಗಿದೆ. ಮೇ-23 ರಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ.
PublicNext
23/05/2022 09:20 pm