ಬೆಂಗಳೂರು: ಆಕ್ಷನ್ ಪ್ರಿನ್ಸ್ ಧೃುವ ಸರ್ಜಾ ತಮ್ಮ ಅಭಿಮಾನಿಗಳಲ್ಲಿ ಈಗೊಂದು ಮನಪೂರ್ವಕ ರಿಕ್ವೆಸ್ಟ್ ಮಾಡಿದ್ದಾರೆ. ಎಲ್ಲಿದ್ದಿರೋ ಅಲ್ಲಿಂದಲೇ ಹೃದಯ ತುಂಬಿ ಹರೆಸಿ ಹಾರೈಸಿ ಅಂತಲೇ ಮನವಿ ಮಾಡಿದ್ದಾರೆ..
ಪೊಗರು ಹೀರೋ ಧ್ರುವ ಸರ್ಜಾ ಅಕ್ಟೊಬರ್ ಇಡೀ ತಿಂಗಳೂ ಬೆಂಗಳೂರು ಬಿಟ್ಟು ಹೊರಗಡೆ ಇರುತ್ತಾರೆ. ಈ ತಿಂಗಳ 6 ರಂದು ಆಕ್ಷನ್ ಪ್ರಿನ್ಸ್ ಧ್ರುವ ಸ್ರಜಾ ಜನ್ಮ ದಿನ ಇದೆ. ಅದನ್ನ ಗಮನದಲ್ಲಿಟ್ಟುಕೊಂಡೇ ಧ್ರುವ ಸರ್ಜಾ, ಅಂದು ಮನೆಗೆ ಬರುವ ಅಭಿಮಾನಿಗಳಲ್ಲಿ ಈಗಲೇ ಬೇಡಿಕೊಂಡಿದ್ದಾರೆ..
ಚಿತ್ರೀಕರಣ ಸಲುವಾಗಿಯೇ ನಾನು ವೈಜಾಕ್ ಗೆ ಹೋಗುತ್ತಿದ್ದೇನೆ. ಅಕ್ಟೊಬರ್ ಇಡೀ ತಿಂಗಳು ಚಿತ್ರೀಕರಣ ಇದೆ. ಅದಕ್ಕಾಗಿಯೇ ನಾನು ಅಲ್ಲಿರುತ್ತೇನೆ.. ಮನೆಗೆ ಬಂದು ಹುಟ್ಟು ಹಬ್ಬ ಶುಭಕೋರುವರು ಎಲ್ಲಿದ್ದಿರೋ ಅಲ್ಲಿಂದಲೇ ಹರೆಸಿ ಹಾರೈಸಿ ಅಂತಲೇ ಕೇಳುಕೊಂಡಿದ್ದಾರೆ..ಧ್ರುವ ಸರ್ಜಾ ಆ ರಿಕ್ವೆಸ್ಟಿಂಗ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವಾಟ್ಸ್ ಅಪ್ ಅಲ್ಲೂ ಹರಿದಾಡುತ್ತಿದೆ..
PublicNext
04/10/2021 01:15 pm