ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಜ ಘಟನೆಯ ಚಿತ್ರದಲ್ಲಿ ನಟಿಸಲಿದ್ದಾರೆ ಗಾಯಕಿ ಅನನ್ಯಾ ಭಟ್

ಹೆಸರಾಂತ ಹಿನ್ನೆಲೆ ಗಾಯಕಿ ಅನನ್ಯಾ ಭಟ್‌ ಇತ್ತೀಚೆಗೆ ನಟನೆಯಲ್ಲೂ ಹೆಸರು ಮಾಡುತ್ತಿದ್ದಾರೆ. ಸದ್ಯ ಈ ತುಂಬುಗಲ್ಲದ ಹುಡುಗಿ 3ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೊಸ ಅಲೆಯ ನಿರ್ದೇಶಕ ಗುರು ಸವನ್ ನಿರ್ದೇಶನದ ‘ಕಾಲ್ಡ್ ಸೇನಾಪುರ’ ಚಿತ್ರದಲ್ಲಿ ಅನನ್ಯಾ ವಿಭಿನ್ನ ಪಾತ್ರ ಮಾಡಲಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾದಲ್ಲಿನ ಅವಕಾಶ ಕುರಿತು ಮಾತನಾಡಿರುವ ಅನನ್ಯಾ ‘ನನಗೆ ಅವಕಾಶಗಳು ಬರುತ್ತಲೇ ಇತ್ತು. ಆದರೆ ಕಥೆಗಳು ಇಷ್ಟವಾಗಿರಲಿಲ್ಲ. ಆದರೆ ಈ ಕಥೆ ನಿಜಕ್ಕೂ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಅಲ್ಲದೇ ಇದು ನೈಜ ಘಟನೆ ಆಧಾರಿತವಾಗಿದೆ. ಚಿತ್ರದಲ್ಲಿ ನಾನು ಎನ್‌ಜಿಒವೊಂದಕ್ಕೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತೆ ರಾಧ ಎಂಬ ಮಹಿಳೆಯ ಪಾತ್ರ ಮಾಡುತ್ತಿದ್ದೇನೆ. ಚಿತ್ರ ಖಂಡಿತ ಗೆಲ್ಲುತ್ತದೆಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

2 ದಶಕಗಳ ಹಿಂದೆ ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆದ ಘಟನೆಯನ್ನು ಈ ಚಿತ್ರ ಆಧರಿಸಿದೆ. ಚಿತ್ರದಲ್ಲಿ ಪವನ್ ಕುಮಾರ್‌, ಗಿರಿರಾಜ್ ಬಿ.ಎಂ., ಪರಮೇಶ್ವರ್ ಗುರುಸ್ವಾಮಿ, ಶೇಖರ್‌, ದಿನೇಶ್ ಮಂಗಳೂರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

Edited By : Nagaraj Tulugeri
PublicNext

PublicNext

01/01/2021 03:56 pm

Cinque Terre

61.33 K

Cinque Terre

0

ಸಂಬಂಧಿತ ಸುದ್ದಿ