ವರದಿ : ಸಂತೋಷ ಬಡಕಂಬಿ.
ಅಥಣಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದು ಕರೆಸಿಕೊಳ್ಳುವ ಮೋಹರಂ ಹಬ್ಬದ ದೇವರ ಕುಣಿತದಲ್ಲೂ ದಿ. ಪುನೀತ್‌ರಾಜಕುಮಾರ ಅವರ ಫೋಟೋ ಹಿಡಿದು ಶಿವನ ಪಾತ್ರಧಾರಿ ಗುಂಪಿನಲ್ಲಿ ಕುಣಿಯುತ್ತಿದ್ದು, ಈಗ ಎಲ್ಲೆಡೆ ಈ ವೀಡಿಯೋ ವೈರಲ್ ಆಗುತ್ತಿದೆ.
ಪುಟ್ಟ ಮಕ್ಕಳು ಕೂಡಾ ಇಷ್ಟ ಪಡುತ್ತಿದ್ದ ಎಲ್ಲರ ಪ್ರೀತಿಯ ಅಪ್ಪು ಅಗಲಿ ಒಂದು ವರ್ಷವಾಗುತ್ತಾ ಬರುತ್ತಿದೆ. ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ನೆನೆಯದ ದಿನಗಳೇ ಇಲ್ಲ. ಅವರು ಮರೆಯಾದ ದಿನದಿಂದ ಹಿಡಿದು ಇಂದಿನವರೆಗೂ ಅಭಿಮಾನಿಗಳು ಒಂದಲ್ಲಾ ಒಂದು ವಿಧದಲ್ಲಿ ಅವರನ್ನು ಸ್ಮರಿಸುತ್ತಲೇ ಇದ್ದಾರೆ.
ಇಂದು ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಹಿಂದೂ-ಮುಸ್ಲಿಂ ಅನ್ನೋ ಬೇಧ ಭಾವ ಮಾಡದೆ ಶಿವ ಪಾರ್ವತಿ, ರಾಮ ಸೀತಾ, ಲಕ್ಷ್ಮಣ, ಹಣಮಂತ ಸೇರಿದಂತೆ ಇತರೆ ದೇವರುಗಳ ವೇಷ ಧರಿಸಿ ನೃತ್ಯ ಮಾಡುತ್ತಿರುವ ವೇಳೆ ಶಿವನ ಪಾತ್ರಧಾರಿ ಯುವಕನೋರ್ವ ಪುನೀತ್‌ರಾಜಕುಮಾರ ಅವರ ಫೋಟೋ ಹಿಡಿದು ಅವರ ಜೊತೆಗೆ ಹೆಜ್ಜೆ ಹಾಕಿ ನೆರೆದ ಜನರಲ್ಲಿ ದಿ. ಪುನೀತ್‌ರಾಜಕುಮಾರ ಅವರನ್ನು ನೆನಪಿಸಿದ್ದು ಮಾತ್ರ ಸುಳ್ಳಲ್ಲ. ಅನಂತರ ಎಲ್ಲ ಯುವಕರು ಹಾಗೂ ಗ್ರಾಮಸ್ಥರು ಸೇರಿ ಪುನೀತ ಅವರ ಫೋಟೋ ಹಿಡಿದು ಮೆರವಣಿಗೆ ಮಾಡಿ ಮೋಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
PublicNext
09/08/2022 04:55 pm