ತುಮಕೂರು: ನೆಚ್ಚಿನ ಶಿಕ್ಷಕರಿಗೆ ವರ್ಗಾವಣೆ ಆಗಿದ್ದರಿಂದ ಶಾಲೆಯಿಂದ ಬೀಳ್ಕೊಡುವ ವೇಳೆ ತಮ್ಮ ಪ್ರೀತಿಯ ಶಿಕ್ಷಕರನ್ನು ವಿದ್ಯಾರ್ಥಿನಿಯರು ತಬ್ಬಿ ಬಿಕ್ಕಿ, ಬಿಕ್ಕಿ ಅತ್ತಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ತುಮಕೂರಿನ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಈ ಘಟನೆ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ, ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಪಾತ್ರವಾಗಿದ್ದ ಕನ್ನಡ ಶಿಕ್ಷಕ ಕೃಷ್ಣಪ್ಪ ನಿರಂತರ 22 ವರ್ಷಗಳಿಂದ ನಗರದ ಎಂಪ್ರೆಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಮುಂಬಡ್ತಿ ಹೊಂದಿ ವರ್ಗಾವಣೆಯಾಗಿದ್ದಾರೆ. ಶಿಕ್ಷಕರನ್ನು ಬೀಳ್ಕೊಡುವ ಸಮಾರಂಭದಲ್ಲಿ ನಮ್ಮನ್ನು ಬಿಟ್ಟು ಹೋಗಬೇಡಿ ಸರ್ ಎಂದು ವಿದ್ಯಾರ್ಥಿನಿಯರು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಶಾಲೆಯ ಇತರೆ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿದ್ದಾರೆ.
PublicNext
04/08/2022 07:09 pm