ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ಶಾಲೆಗೆ ಸುಣ್ಣ-ಬಣ್ಣ ಬಳಿದು ಕಾಯಕಲ್ಪ ನೀಡಿದವರಿಗೆ ಸನ್ಮಾನ

ಕೊರಟಗೆರೆ: ತಾಲೂಕಿನ ಹೊನ್ನಾರನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಗ್ರಾಮಸ್ಥರು ಚಿಗುರು ಜನಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಎನ್ ಶ್ರೀನಿವಾಸ್ ಮತ್ತು ಟ್ರಸ್ಟ್‌ನ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು.

ಇತ್ತೀಚೆಗೆ ಚಿಗುರು ಜನಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಶಾಲೆಗೆ ಸುಣ್ಣ-ಬಣ್ಣ ಬಳಿದು ಕಾಯಕಲ್ಪ ನೀಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಿ ಆರ್ ಪಿ ಅಂಜನಪ್ಪ, ಮುಖ್ಯೋಪಾಧ್ಯಾಯರಾದ ರಾಮಯ್ಯ ಬಿ.ಜಿ, ಶಿಕ್ಷಕರಾದ ದ್ರಾಕ್ಷಾಯಿಣಿ, ಗುರುಸಿದ್ಧ ರಾಧ್ಯ. ಶೈಲಶ್ರೀ, ಎಸ್‌ಡಿಎಂಸಿ ಅಧ್ಯಕ್ಷ ರಂಗರಾಜು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳಾದ ಪ್ರದೀಪ್, ಜಯರಾಮ, ಶಶಿಧರ್,ವರದರಾಜ್,ಚಂದ್ರ, ಊರಿನ ಗ್ರಾಮಸ್ಥರು ಇದ್ದರು.

Edited By : Vijay Kumar
PublicNext

PublicNext

12/07/2022 06:43 pm

Cinque Terre

18.43 K

Cinque Terre

0