ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : 4 ತಿಂಗಳ ಕಂದನೊಂದಿಗೆ ಬಂದು sslc ಪರೀಕ್ಷೆ ಬರೆದ ಮಹಿಳೆ

ವಿಜಯಪುರ : ರಾಜ್ಯದಲ್ಲಿ ಇಂದಿನಿಂದ sslc ಪರೀಕ್ಷಗಳು ಆರಂಭಗೊಂಡಿವೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರಕ್ಕೆ 4 ತಿಂಗಳ ಹಸುಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಪರೀಕ್ಷಾರ್ಥಿ ಮಹಿಳೆ ಮೊದಲ ಪರೀಕ್ಷೆಯನ್ನು ಬರೆದಿದ್ದಾರೆ.

ಪರೀಕ್ಷಾ ಕೇಂದ್ರದ ಹೊರಗಡೆ ಆಶಾ ಕಾರ್ಯಕರ್ತೆ ಬಳಿ ಮಗು ಬಿಟ್ಟು ಪರೀಕ್ಷೆಗೆ ಹಾಜರಾದ ತಾಯಿ ತಸ್ಲೀಮಾ ಮಕಾನದಾರ್ ಉತ್ತಮವಾಗಿ ಪರೀಕ್ಷೆ ಬರೆದಿದ್ದಾರೆ.

ಬಾಹ್ಯ ಪರೀಕ್ಷಾರ್ಥಿಯಾಗಿರೋ ತಸ್ಲೀಮಾ ಮಕಾನದಾರ್ ಪರೀಕ್ಷಾ ಕೊಠಡಿಗೆ ಹೋದ ಬಳಿಕ ಆಶಾ ಕಾರ್ಯಕರ್ತೆ ಉಮಾ ಶಾರದಹಳ್ಳಿ ಮಗುವನ್ನು ತಾಯಿಯಂತೆ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Edited By :
PublicNext

PublicNext

28/03/2022 07:11 pm

Cinque Terre

64.59 K

Cinque Terre

7