ಬೆಂಗಳೂರು : ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳಲ್ಲಿ ಕೆಲ ಪ್ರಶ್ನೆಗಳನ್ನು ತಪ್ಪಾಗಿ ಹಾಗೂ ಪಠ್ಯೇತರವಾಗಿ ಕೇಳಿ ಎಡಟ್ಟು ಮಾಡಿದ ಪಿ.ಯು ಮಂಡಳಿ ಅಂತಹ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಕೈಬಿಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ತನ್ನಿಂದಾದ ಲೋಪವನ್ನು ಸರಿ ಮಾಡಲು ಮುಂದಾಗಿರುವ ಪಿಯು ಇಲಾಖೆಯು ಲೋಪಗಳಿಂದ ಕೂಡಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಬದಲು ಸರಿ ಇರುವ ಪ್ರಶ್ನೆಗಳಿಗೆ ಬಂದ ಅಂಕಗಳನ್ನೇ 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.
ಈ ಸಂಬಂಧ ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಯಾವ್ಯಾವ ಜಿಲ್ಲೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಇಂತಹ ಲೋಪಗಳಾಗಿವೆಯೋ ಅಂತಹ ಎಲ್ಲ ಪ್ರಶ್ನೆಗಳನ್ನು ಮೌಲ್ಯ ಮಾಪನ ವ್ಯಾಪ್ತಿಯಿಂದ ಕೈ ಬಿಟ್ಟು, ಸರಿಯಾಗಿರುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬರೆದಿರುವ ಉತ್ತರಗಳನ್ನು ಮಾತ್ರ ಮೌಲ್ಯ ಮಾಪನ ಮಾಡಿ ಆ ಅಂಕಗಳನ್ನು 100 ಅಂಕಗಳಿಗೆ ಮಾರ್ಪಡಿಸಿ ಫಲಿತಾಂಶ ನೀಡಬೇಕು ಎಂದು ಎಲ್ಲ ಜಿಲ್ಲೆಗಳ ಪದವಿ ಪೂರ್ವ ಉಪನಿರ್ದೇಶಕರಿಗೆ (ಡಿಡಿಪಿಯು DDPU) ಇಲಾಖೆ ನಿರ್ದೇಶಕರಾದ ಸ್ನೇಹಲ್ ಅವರು ಸೂಚನೆ ನೀಡಿದ್ದಾರೆ.
PublicNext
28/12/2021 09:26 am