ಬೆಂಗಳೂರು:ಸಿಇಟಿ ಮೂಲಕ ಸೀಟ್ ಪಡೆಯುವ ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲೋ ಇಲ್ಲವೇ ಅವಧಿ ಮುಗಿದ ಬಳಿಕ ಸೀಟ್ ಬಿಟ್ಟರೇ ಅವರು ಲಕ್ಷಾಂತರ ರೂಪಾಯಿ ದಂಡ ಕಟ್ಟಲೇಬೇಕಾಗುತ್ತದೆ. ಈ ಮೂಲಕ ಈಗ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ ಶುರು ಆಗಿದೆ.
ನೀಟ್ ಮೂಲಕ ಸೀಟ್ ಪಡೆದು ಕೆಲವ್ರು ಕೊನೆ ಕ್ಷಣದಲ್ಲಿ ಪಡೆದ ಸೀಟ್ ಬಿಟ್ಟು ಹೋಗಿ ಬಿಡುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶವೇ ಇಲ್ಲ. ಸೀಟ್ ಪಡೆದ ವಿದ್ಯಾರ್ಥಿಗಳು ಇನ್ನೇನೂ ಕೊನೆ ದಿನ ಇದೆ ಅನ್ನೋ ಹೊತ್ತಿಗೆ ಸೀಟ್ ಬಿಟ್ಟು ಹೊರಟು ಹೋಗಿ ಬಿಡುತ್ತಿದ್ದರು. ಅದಕ್ಕೆ ಕಡಿವಾಣ ಹಾಕಲೆಂದೇ ಕಳೆದ ವರ್ಷದಿಂದ ನೀಟ್ ಹೊಸ ನಿಯಮ ಜಾರಿಗೆ ತಂದಿದೆ.
ಹೌದು ವಿದ್ಯಾರ್ಥಿಗಳು ನಿಗದಿತ ಅವಧಿಯ ಒಳಗೆ ಸೀಟ್ ರದ್ದು ಮಾಡಿಕೊಂಡರೇ, ಅವರು ಶುಲ್ಕದ 5 ಪಟ್ಟು ಹಣ ಪಾವತಿಸಬೇಕು ಎಂದೇ ನಿಯಮ ಇದೆ.ಕಳೆದ ವರ್ಷ 200 ವಿದ್ಯಾರ್ಥಿಗಳು ಅನಿವಾರ್ಯವಾಗಿಯೇ 5 ಪಟ್ಟು ದಂಡ ಕಟ್ಟಿದ್ದಾರೆ.
ಆದರೆ ಈ ಮೊದಲು ಹಾಗಿರಲಿಲ್ಲ. ನಿಗದಿತ ಅವಧಿಯಲ್ಲಿ ಒಳಗೇನೆ ಸೀಟ್ ರದ್ದುಗೊಳಿಸಿದ್ದರೇ ಅವರು ಕೇವಲ ಪ್ರಕ್ರಿಯೆ ಶುಲ್ಕ 5 ಸಾವಿರ ಕಟ್ಟಬೇಕಿತ್ತು. ಇದರ ಲಾಭದಿಂದಲೇ ವಿದ್ಯಾರ್ಥಿಗಳು ಕೊನೆ ಕ್ಷಣದಲ್ಲಿ ಸೀಟ್ ರದ್ದು ಮಾಡುತ್ತಿದ್ದರು. ಆದರೆ ಈಗ ಹಾಗೆ ಹಾಕಲು ಚಾನ್ಸ್ ಇಲ್ಲ ಬಿಡಿ.
PublicNext
27/12/2021 09:12 am