ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಚ್ಚಿನ ಶಿಕ್ಷಕರ ವರ್ಗಾವಣೆ,ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

ಬಾಗಲಕೋಟೆ: ಮಕ್ಕಳ ಸುಂದರವಾದ ಭವಿಷ್ಯ ರೂಪಿಸುವ ಶಿಕ್ಷಕರು ತರಗತಿಯಲ್ಲಷ್ಟೇ ಪ್ರಾಧ್ಯಾಪಕರಾಗಿರದೇ ಮಕ್ಕಳ ಮನ ಮನೆಯಲ್ಲೂ ಶಾಶ್ವತ ನೆಲೆ ಕಂಡುಕೊಂಡು ಎಲ್ಲರ ಪ್ರೀತಿಯ ಟೀಚರ್ ಎಂದೆನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.ಹೌದು ಇಲ್ಲೊಂದು ಶಾಲೆಯಲ್ಲಿ ಅಂತಹ ಪೇವರೆಟ್ ಟೇಚರ್ ಅನ್ನು ಕಳುಹಿಸಿಕೊಡಲು ಇಷ್ಟವಿಲ್ಲದೇ ಮಕ್ಕಳು ಕಣ್ಣೀರು ಹಾಕಿರುವ ಘಟನೆಯೊಂದು ನಗರದ ಎಲ್‌.ಎಸ್.ಬೀಳಗಿ, ಸಕಾ೯ರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಇಲ್ಲಿನ ಸಮಾಜ ವಿಜ್ಞಾನ ಭೋದಿಸುವ ಶಿಕ್ಷಕ ಬೀಳಗಿ ಅವರು ಅನವಾಲದಿಂದ ಸೀಮಿಕೇರಿಗೆ ವರ್ಗಾವಣೆಯಾಗಿರುವುದರಿಂದ

ಶಾಲೆ ಬಿಟ್ಟು ಹೋಗುತ್ತಿರುವ ಶಿಕ್ಷಕರ ಎದುರು ಮಕ್ಕಳು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.

ಮಕ್ಕಳು ಅಳುವ ದೃಶ್ಯ ಎಂತವರ ಮನಕಲಕುವಂತಿದೆ.ಮಕ್ಕಳ ಪ್ರೀತಿ ಕಂಡು ಶಿಕ್ಷಕರು ಕೂಡ ತುಂಬಾ ಭಾವುಕರಾಗಿದ್ದಾರೆ.

ನೆಚ್ಚಿನ ಶಿಕ್ಷಕರ ಮೇಲೆ ಅತೀವ ಪ್ರೀತಿಇಂದ ವಿದ್ಯಾರ್ಥಿಗಳು ಅತ್ತು ಅವರ ಕೈಗೆ ಹೂವಿಟ್ಟು, ಕಾಲಿಗೆ ನಮಸ್ಕರಿಸಿ ಬೀಳ್ಕೊಟ್ಟಿದ್ದಾರೆ.

ಕಳೆದ 15 ವಷ೯ಗಳಿಂದ ಇವರು ಅನವಾಲ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಗೂ ಭಾಜನರಾಗಿದ್ದ ಇವರನ್ನು ಮಕ್ಕಳು ಮನಸ್ಸಿಲ್ಲದ ಮನಸ್ಸಿಂದ ಕಳುಹಿಸಿಕೊಟ್ಟದಂತು ಸತ್ಯ.

Edited By : Shivu K
PublicNext

PublicNext

14/12/2021 01:02 pm

Cinque Terre

152.24 K

Cinque Terre

8