ಗಾಂಧಿನಗರ: ಯುವತಿಯೋರ್ವಳು ಕಾಲೇಜಿನಲ್ಲಿ ಪರೀಕ್ಷೆ ಬರೆದ ಬಳಿಕವೇ ಮದುವೆ ಮಾಡಿಕೊಂಡಿರುವ ಪ್ರಸಂಗ ಗುಜರಾತ್ನಲ್ಲಿ ನಡೆದಿದ್ದು, ಯುವತಿಗೆ ಪರೀಕ್ಷೆಗೆ ಹಾಜರಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೌರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ನಿನ್ನೆ (ಮಂಗಳವಾರ)ದಿಂದ ಸೆಮಿಸ್ಟರ್ ಪರೀಕ್ಷೆ ಆರಂಭಗೊಂಡಿದ್ದು, ವಿವಿಧ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇದರ ಮಧ್ಯೆ ಯುವತಿಯೋರ್ವಳು ತನ್ನ ಭಾವಿ ಪತಿಯೊಂದಿಗೆ ಪರೀಕ್ಷೆ ಬರೆಯಲು ಲೆಹಂಗಾ ತೊಟ್ಟು ಕಾಲೇಜಿಗೆ ಹಾಜರಾದರು. ಬಿಎಸ್ಡಬ್ಲೂ ವ್ಯಾಸಂಗ ಮಾಡುತ್ತಿರುವ ಶಿವಾಂಗಿ ತನ್ನ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಮದುವೆ ದಿನವೇ ಕಾಲೇಜ್ಗೆ ಆಗಮಿಸಿದ್ದರು.
PublicNext
24/11/2021 07:52 am