ಎಕ್ಸ್ ಕ್ಲೂಸಿವ್ ರಿಪೋರ್ಟ್: ಗಣೇಶ್ ಹೆಗಡೆ
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರೀತಿಯಲ್ಲೇ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.
ನವೆಂಬರ್ 29 ರಿಂದ ಡಿಸೆಂಬರ್ 10ರ ವರೆಗೆ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿ ನಿಗದಿಯಾಗಿತ್ತು.
ಆದರೆ, ಈ ಮೊದಲಿನಂತೆಯೇ ಮಧ್ಯ ವಾರ್ಷಿಕ ಪರೀಕ್ಷೆ ಜಿಲ್ಲಾ ಮಟ್ಟದಲ್ಲಿ ನಡೆಸಲು ಪಿಯು ಬೋರ್ಡ್ ನಿರ್ಧರಿಸುವ ಸಾಧ್ಯತೆ ಕಾಣುತ್ತಿದೆ.
ಇಲಾಖೆಯ ಉನ್ನತ ಮೂಲಗಳು 'ಪಬ್ಲಿಕ್ ನೆಕ್ಸ್ಟ್' ಗೆ ನೀಡಿರುವ ಮಾಹಿತಿ ಪ್ರಕಾರ ನಾಳೆ ತಮ್ಮ ಆದೇಶವನ್ನು ಪಿಯು ಬೋರ್ಡ್ ಹಿಂಪಡೆಯುವ ಸಂಭವವಿದೆ.
ನಾಳೆ ಸಚಿವರ ಹಾಗೂ ಪಿಯು ಬೋರ್ಡ್ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ. ಆ ಬಳಿಕ ಈ ಬಗೆಗಿನ ನಿರ್ಧಾರ ಹೊರಬೀಳಲಿದೆ.
ಪಿಯು ಬೋರ್ಡ್ ಮಧ್ಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಹಾಗೂ ಮೌಲ್ಯಮಾಪನಕ್ಕೂ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಸಿಬಿಎಸ್‌ಸಿ, ಐಸಿಎಸ್‌ಇ ಮಧ್ಯ ವಾರ್ಷಿಕ ಪರೀಕ್ಷೆ ಬಗ್ಗೆ ಮೊದಲೇ ಮಾಹಿತಿ ನೀಡಿತ್ತು.
ಆದರೆ, ಪಿಯು ಬೋರ್ಡ್ ವಿರುದ್ಧ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಪಿಯು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಪಿಯು ಬೋರ್ಡ್ ಮಣಿದಂತೆ ಕಾಣುತ್ತಿದೆ.
PublicNext
17/11/2021 10:25 pm