ಬೆಂಗಳೂರು: ಪಠ್ಯಕ್ರಮ ಪೂರ್ಣಗೊಳಿಸಲು ಭಾನುವಾರವೂ ಶಾಲೆ ನಡೆಸೋಕೆ ಸರ್ಕಾರ ಚಿಂತನೆ ನಡೆಸಿದೆ. ಆದರೆ ಪಠ್ಯಕ್ರಮ ಕಡಿತ ಮಾಡುವ ಆಲೋಚನೆ ಇಲ್ಲವೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಭಾನುವಾರವೂ ಶಾಲೆ ನಡೆಸೋ ವಿಚಾರವಾಗಿ,ಸಿಎಂ.ಬೊಮ್ಮಾಯಿ ಅವರೊಟ್ಟಿಗೆ ಸಮಾಲೋಚನೆ ನಡೆಸಿ,ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನೂತೆಗೆದುಕೊಳ್ಳಲಾಗುವುದು. ಅದರಂತೆ ಪಠ್ಯಕ್ರಮ ಕಡಿತಗೊಳಿಸೋ ಮಾತೇ ಇಲ್ಲ. ಶನಿವಾರ ಮತ್ತು ಭಾನುವಾರವೂ ಶಾಲೆ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸಲು ಪರಿಶೀಲನೆ ನಡೆಸಲಾಗಿದೆ. ಪರೀಕ್ಷೆಗೆ ಅಗತ್ಯ ಬಿದ್ದರೆ ಮಾತ್ರ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಜನವರಿ-ಫೆಬ್ರವರಿ ತಿಂಗಳಲ್ಲಿ ತೀರ್ಮಾನಿಸಲಾಗಿತ್ತು ಎಂದಿದ್ದಾರೆ ಶಿಕ್ಷಣ ಸಚಿವರು.
PublicNext
17/10/2021 02:48 pm