ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ತನ್ನ ಘನತೆ ಕಳೆದುಕೊಳ್ಳುತ್ತಿದೆ. ಸದ್ಯ ನ್ಯಾಕ್ ನಡೆಸಿದ ಪರೀಕ್ಷೆಯಲ್ಲಿ ವಿವಿ ಜಸ್ಟ್ ಪಾಸ್ ಆಗಿದೆ. ಈ ಹಿಂದೆ 0.46 ಅಂಕದೊಂದಿಗೆ A+ ಮಾನ್ಯತೆ ಹೊಂದಿದ್ದ ವಿವಿ, ಇದೀಗ A ಗ್ರೇಡ್ ಗೆ ಇಳಿದಿದೆ. ಕಳೆದ 12 ವರ್ಷದಿಂದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯದಿರುವುದೇ ಹಿನ್ನೆಡೆಗೆ ಪ್ರಮುಖ ಕಾರಣ.
ಸೆಪ್ಟೆಂಬರ್ 15ರಂದು 7 ಜನರ ನ್ಯಾಕ್ ತಂಡ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತ್ತು. 2014ರಿಂದ 2019 ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಿತ್ತು. ಒಟ್ಟು ಸಾವಿರ ಅಂಕದಲ್ಲಿ 700 ಅಂಕಗಳನ್ನು ವಿವಿ ಸಲ್ಲಿಸಿದ್ದ ಡೇಟಾಗಳಿಗೂ ಹಾಗೂ 300 ಅಂಕಗಳನ್ನು ನ್ಯಾಕ್ ತಂಡದ ಪರಿಶೀಲನೆ ಬಳಿಕ ನೀಡಬೇಕಾಗಿತ್ತು.
ಇದರಲ್ಲಿ ಮೈಸೂರು ವಿವಿಗೆ 3.01 ಅಂಕಗಳು ಅಂದ್ರೆ ಶೇ.75.05 ರಷ್ಟು ಅಂಕ ಪಡೆದಿದ್ದು A ಗ್ರೇಡ್ ಗೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ ನ 4ನೇ ಆವೃತ್ತಿಯಲ್ಲಿ ‘ಎ’ ಗ್ರೇಡ್ ಸಿಕ್ಕಿದೆ. ಕಳೆದ ಬಾರಿ 3.47 ಅಂಕ ಪಡೆದುಕೊಂಡಿದ್ದ ವಿವಿ, A+ ಗ್ರೇಡ್ ಪಡೆದಿತ್ತು.
ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ನಿಗದಿತ ಟಾರ್ಗೆಟ್ ಮುಟ್ಟುವಲ್ಲಿ ಮೈಸೂರು ವಿವಿ ವಿಫಲವಾಗಿದೆ. 2007ರಿಂದಲೂ ಮೈಸೂರು ವಿವಿಗೆ ಖಾಯಂ ಸಿಬ್ಬಂದಿ ನೇಮಕಾತಿ ನಡೆದಿಲ್ಲ.
PublicNext
23/09/2021 07:23 pm