ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯನಾಗುವ ಕನಸು ಬಿಚ್ಚಿಟ್ಟ ಸಿಇಟಿಯ 5 ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮೇಘನ್

ಮೈಸೂರು: ಮೈಸೂರಿನ ಹೆಚ್.ಕೆ.ಮೇಘನ್ ಸಿಇಟಿ ಪರೀಕ್ಷೆಯ ಎಲ್ಲಾ ವಿಭಾಗದಲ್ಲೂ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಹೊಸಕೆರೆ ಗ್ರಾಮದವರಾದ ಮೇಘನ್ ಎಚ್‌.ಕೆ. ಅವರು ಪ್ರಸ್ತುತ ಮೈಸೂರಿನ ರಾಮಕೃಷ್ಣ ನಗರದಲ್ಲಿ ವಾಸವಾಗಿದ್ದಾರೆ. ಮೇಘನ್ ಅವರ ತಂದೆ ಕೆ.ಆರ್.ನಗರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ತಾಯಿ ಲೀಲಾವತಿ ನೃಪತುಂಗ ಕನ್ನಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಮೇಘನ್ 'ಪ್ರಮತಿ ಹಿಲ್ ವ್ಯೂ ಅಕಾಡೆಮಿ’ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಮೇಘನ್ ಎಂಜಿನಿಯರಿಂಗ್, ಕೃಷಿ, ಬಿಫಾರ್ಮಾ, ನ್ಯಾಚ್ಯುರೋಪತಿ ಹಾಗೂ ಪಶು ವೈದ್ಯಕೀಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ.

ಪಿಯುಸಿ ಯಲ್ಲಿ 500ಕ್ಕೆ 494 ಅಂಕ (ಸಿಬಿಎಸ್ಸಿ) ಪಡೆದಿದ್ದರು. ಮುಂದೆ ಮೆಡಿಕಲ್ ಓದಬೇಕೆಂಬುವುದು ಮೇಘನ್ ಆಸೆಯಂತೆ. ಮೇಘನ್ ಅಣ್ಣ ಲಿಖಿತ್.ಹೆಚ್‌.ಕೆ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.

Edited By : Vijay Kumar
PublicNext

PublicNext

20/09/2021 08:45 pm

Cinque Terre

47.9 K

Cinque Terre

0