ತೇಜ್‌ಪುರ(ಅಸ್ಸಾಮ್): ಪರೀಕ್ಷಾ ಕೇಂದ್ರಕ್ಕೆ ಶಾರ್ಟ್ಸ್ ಧರಿಸಿ ಬಂದಿದ್ದ 19 ವರ್ಷದ ವಿದ್ಯಾರ್ಥಿನಿಗೆ ಕಾಲುಗಳಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಯುವಂತೆ ಮಾಡಿರುವ ಘಟನೆ ಅಸ್ಸಾಂನ ತೇಜ್‌ಪುರ ನಗರದಲ್ಲಿನಡೆದಿದೆ. ಜುಬ್ಲೀ ತಮುಲಿ ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ ಕಾಲೇಜಿಗೆ ಆಗಮಿಸಿದ್ದಳು. ಪರೀಕ್ಷೆ ವೇಳೆ ಡ್ರೆಸ್ ಕೋಡ್ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
ಜೋಹರ್ತ್ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಅಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿ.ಮೀ. ದೂರದ ತೇಜಪುರಕ್ಕೆ ಬೆಳಗ್ಗೆ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಜುಬ್ಲೀ ಪರೀಕ್ಷಾ ಕೇಂದ್ರ ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರವೇಶಿಸಿದಾಗ ಯಾವುದೇ ತೊಂದರೆ ಎದುರಾಗಿರಲಿಲ್ಲ. ಆದರೆ ಪರೀಕ್ಷಾ ಕೊಠಡಿಯೊಳಗೆ ಹೋದಾಗ ಆಕೆ ಧರಿಸಿರುವ ಉಡುಪಿನ ಬಗ್ಗೆ ಇತರ ಪರೀಕ್ಷಾರ್ಥಿಗಳು ಈ ಬಗ್ಗೆ ಚಕಾರ ಎತ್ತಿದ್ದಾರೆ. ಆಗ ಪರೀಕ್ಷಾ ಮೇಲ್ವಿಚಾರಕರು ಯುವತಿಗೆ ಕರ್ಟನ್ ಸುತ್ತಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.
PublicNext
17/09/2021 12:24 pm