ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ?

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2020-21ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಜೂ.14ರಿಂದ ಜೂ.25ರವರೆಗೆ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಪ್ರಥಮ ಭಾಷೆ ಮತ್ತು ಕೋರ್ಸ್ ಸಬ್ಜೆಕ್ಟ್‌ಗೆ 3:15 ಗಂಟೆ ಪರೀಕ್ಷೆ ಬರೆಯಲು ಸಮಯ ನೀಡಲಾಗುವುದು. ದ್ವೀತಿಯ ಮತ್ತು ತೃತೀಯ ಭಾಷೆಗೆ 3 ಗಂಟೆ ಸಮಯ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

ಜೂ. 14 – ಪ್ರಥಮ ಭಾಷೆ

ಜೂ. 16 – ಕೋರ್ ಸಬ್ಜೆಕ್ಟ್, ಗಣಿತ

ಜೂ. 18 – ದ್ವಿತೀಯ ಭಾಷೆ

ಜೂ. 21 – ವಿಜ್ಞಾನ

ಜೂ. 23 – ತೃತೀಯ ಭಾಷೆ

ಜೂ. 25 – ಸಮಾಜ ವಿಜ್ಞಾನ

ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 26ವರೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಎಸ್‍ಎಸ್‍ಎಲ್‌ಸಿ ಬೋರ್ಡ್ ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

Edited By : Vijay Kumar
PublicNext

PublicNext

28/01/2021 05:34 pm

Cinque Terre

33.95 K

Cinque Terre

0