ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ ಶುರುವಾತಿ ವದಂತಿ : ಶಿಕ್ಷಣ ಸಚಿವರ ಸ್ಪಷ್ಟನೆ

ನವದೆಹಲಿ : ಡೆಡ್ಲಿ ಸೋಂಕು ಕೊರೊನಾದಿಂದಾಗಿ ಈ ವರ್ಷದ ಶೈಕ್ಷಣಿಕ ಕ್ಷೇತ್ರದಲ್ಲಿ ಬಾರಿ ಅಲ್ಲೋಲಕಲ್ಲೋಲವಾಗಿದೆ.

ಇದರ ಮಧ್ಯೆ ಸೋಂಕಿನಿಂದ ಬಂದಾದ ಶಾಲೆಗಳ ಮರು ಪ್ರಾರಂಭದ ಬಗ್ಗೆ ದಿನಕೊಂದು ಗೊಂದಲುಗಳು ಪಾಲಕರು ಸೇರಿದಂತೆ ಮಕ್ಕಳನ್ನೂ ಕನ್ ಫ್ಯೂಸ್ ಮಾಡುತ್ತಿದೆ.

ಅಕ್ಟೋಬರ್ 15ರ ಬಳಿಕ ಶಾಲೆಗಳನ್ನು ತೆರೆಯಲು ನಿರ್ಧರಿಸಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಬಳಿಕ ಶಾಲೆಗಳ ಆರಂಭ ಕುರಿತು ಎಲ್ಲ ರಾಜ್ಯಗಳಲ್ಲಿ ಚಿಂತನೆ ಶುರುವಾಗಿದೆ.

ಕರ್ನಾಟಕದಲ್ಲೂ ಶಾಲೆ ಶುರು ಮಾಡಬೇಕೋ ಬೇಡವೋ ಎಂಬ ಬಗ್ಗೆ ಈಗಾಗಲೇ ಅಭಿಪ್ರಾಯ ಕೇಳಲಾಗಿದ್ದು, ಸರ್ಕಾರವೂ ಆ ಕುರಿತು ಭಾರಿ ಚರ್ಚೆಯನ್ನು ನಡೆಸುತ್ತಿದೆ.

ಈ ನಡುವೆ ಬಹಳಷ್ಟು ಪಾಲಕರು ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಸಲಹೆ ನೀಡಿದ್ದಾರೆ.

ಈ ಮಧ್ಯೆ ಶಾಲೆಗಳನ್ನು ಪುನಃ ಆರಂಭಿಸುವ ಕುರಿತು ದೆಹಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿದೆ.

ದೆಹಲಿಯಲ್ಲಿ ಸರ್ಕಾರಿ ಹಾಗೂ ಖಾಸಗಿಯ ಎಲ್ಲ ಶಾಲೆಗಳು ಅಕ್ಟೋಬರ್ 31ರ ವರೆಗೂ ಮುಚ್ಚಿರಲಿವೆ.

ಈ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅಲ್ಲಿನ ಶಿಕ್ಷಣ ಸಚಿವ ಮನಿಷ್ ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

04/10/2020 01:52 pm

Cinque Terre

72.18 K

Cinque Terre

0