ಕಾರವಾರ: ಪರೀಕ್ಷೆ ಪಾಸು ಮಾಡಿಸು, ಪೊಲೀಸ್ ನೌಕರಿ ದಯಪಾಲಿಸುವಂತೆ ಭಕ್ತರೋರ್ವರು ಭಟ್ಕಳದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿತ ಗಣಪನಿಗೆ ಬೇಡಿಕೊಂಡು, ಕಾಣಿಕೆ ಡಬ್ಬಿಯಲ್ಲಿ ಚೀಟಿ ಹಾಕಿ ಹೋಗಿದ್ದಾರೆ.
ಗಣಪತಿಗೆ ಹ್ಯಾಪಿ ಬರ್ತ್ ಡೇ ಕೋರಿ ಚೀಟಿಯಲ್ಲಿ ಬರಹ ಆರಂಭಿಸಲಾಗಿದ್ದು, ನಾನು ಸ್ಟಡಿ ಮಾಡುತ್ತಿದ್ದೇನೆ. 6ರಿಂದ 10ನೇ ತರಗತಿಯವರೆಗಿನ ಪುಸ್ತಕವನ್ನು ರೆಫರ್ ಮಾಡಿದ್ದೇನೆ, ಈಗಲೂ ಮಾಡ್ತಾ ಇದ್ದೇನೆ. ನನಗೆ ಚಿಕ್ಕ ವಯಸ್ಸಿನಿಂದ ಪೊಲೀಸ್ ಆಗಬೇಕು ಎನ್ನುವ ಆಸೆ ಇದೆ. ಇಷ್ಟಪಟ್ಟು ಕಷ್ಟಪಟ್ಟು ಓದುತ್ತೇನೆ. ಆದರೆ ನೀನೇ ಪರೀಕ್ಷೆಯಲ್ಲಿ ಪಾಸು ಮಾಡಬೇಕು. ಈ ಭೂಮಿಯ ಮೇಲೆ ಇರುವ ಎಲ್ಲರಿಗೂ ಒಳ್ಳೆಯದು ಮಾಡು ಎಂದು ನಿವೇದಿಸಿಕೊಳ್ಳಲಾಗಿದೆ.
ಕಾಣಿಕೆ ಹಣ ಲೆಕ್ಕ ಹಾಕುವ ವೇಳೆ ಭಕ್ತನ ಈ ಚೀಟಿ ಇದೀಗ ಪೊಲೀಸರ ಕೈಗೆ ಸಿಕ್ಕಿದ್ದು, ಎಲ್ಲೆಡೆ ವೈರಲ್ ಆಗಿದೆ.
PublicNext
06/09/2022 08:34 pm