ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅತಿ ದೊಡ್ಡ ವಸತಿ ನಿಲಯ ಇದಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು ಅವರು ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿ ಹೆಸರು ಮಾಡಿರುವ ಶಿಗ್ಲಿಯಲ್ಲಿ ವಸತಿ ನಿಲಯಗಳು ಅವಶ್ಯಕತೆ ಇತ್ತು ನಿರ್ಮಾಣವಾದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳಿದ್ದು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಮುಂದಿನ ದಿನಮಾನಗಳಲ್ಲಿ ಗ್ರಾಮದಲ್ಲಿ ಬಾಲಕಿಯರ ಬಾಲಕರ ಮೆಟ್ರಿಕ ಪೂರ್ವ ವಸತಿ ನಿರ್ಮಾಣ ಮಾಡಲು ಸರಕಾರ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಮ್ ಎಮ್ ತುಂಬರಮಟ್ಟಿ ಮಾತನಾಡಿ ಸುಮಾರು 7ವರ್ಷಗಳ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ನಿರ್ವಹಿಸುತ್ತಿದ್ದು ಇಂದು ಸುಮಾರು 3.11ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ ವಿಶೇಷವಾದ ಸೌಲಭ್ಯವನ್ನು ಹೊಂದಿದ್ದು ಕಟ್ಟಡದಲ್ಲಿ 17ವಸತಿ ಕೋಣೆಗಳಿದ್ದು ವಿದ್ಯಾರ್ಥಿನಿಯರಿಗೆ ಶುದ್ಧಕುಡಿಯುವ ನೀರು, ಸೋಲಾರವಾಟರ, ಕಿಚನ್, ಲೈಬ್ರರಿ, ಕಂಪ್ಯೂಟರ್ ರೂಮ್, ಸ್ಟೋರ್ ರೂಮ್,ಎಲೆಕ್ಟ್ರಿಕಲ್ ರೂಮ್, ಶೌಚಾಲಯ ಸೇರಿದಂತೆ ಸುಮಾರು 100 ವಿದ್ಯಾರ್ಥಿಗಳ ಇರುವ ಭವ್ಯ ಕಟ್ಟಡವಾಗಿದೆ. ಕಳೆದ ಬಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
PublicNext
27/07/2022 04:26 pm