ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟ : ಕರ್ನಾಟಕದ ಶಿಶಿರ್ ಪ್ರಥಮ ಸಿಎಂ ಅಭಿನಂದನೆ

ಬೆಂಗಳೂರು: ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ವಿದ್ಯಾರ್ಥಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಕರ್ನಾಟಕ ಮೂಲದ ಕೆ ಶಿಶಿರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರು ಐಐಟಿ ಝೋನ್ ನಿಂದ ಪರೀಕ್ಷೆ ಬರೆದವರು. ಹಾಗೆಯೇ ಪೋಲು ಲಕ್ಷ್ಮೀ ಸಾಯಿ ಲೋಹಿತ್ ರೆಡ್ಡಿ ಎರಡನೇ ಮತ್ತು ಥಾಮಸ್ ಬಿಜು ಚೀರಂವೇಲಿಲ್ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

ಕಳೆದ ತಿಂಗಳು ಆಗಸ್ಟ್ 28ರಂದು ಪರೀಕ್ಷೆ ನಡೆದಿತ್ತು, ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ - jeeadv.ac.in ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ.

ಈ ಬಾರಿ ಟಾಪ್ 10ರಲ್ಲಿ ಹುಡುಗರೇ ಇರುವುದು ವಿಶೇಷ. ಹುಡುಗಿಯರಲ್ಲಿ 16ನೇ ರ‍್ಯಾಂಕ್ ನ್ನು ಐಐಟಿ ದೆಹಲಿ ಝೋನ್ ನ ತನಿಷ್ಕಾ ಕಾಬ್ರಾ ಮೊದಲ ಸ್ಥಾನ ಪಡೆದಿದ್ದಾರೆ. ವಂಗಪಲ್ಲಿ ಸಾಯಿ ಸಿದ್ಧಾರ್ಥ್ 4ನೇ ಸ್ಥಾನ, ಮಯಾಂಕ್ ಮೋಟ್ವಾನಿ 5ನೇ ಸ್ಥಾನ, ಪೋಲಿಸೆಟ್ಟಿ ಕಾರ್ತಿಕೇಯ 6ನೇ ಸ್ಥಾನ, ಪ್ರತೀಕ್ ಸಾಹೂ 7ನೇ ಸ್ಥಾನ, ಧೀರಜ್ ಕುರುಕುಂದಾ 8ನೇ ಸ್ಥಾನ, ಮಹಿತ್ 9ನೇ ಸ್ಥಾನ ಹಾಗೂ ಮಹೇಶ್ 10ನೇ ಸ್ಥಾನ ಪಡೆದಿದ್ದಾರೆ.

ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಶಿಶಿರ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

Edited By : Nirmala Aralikatti
PublicNext

PublicNext

11/09/2022 10:41 pm

Cinque Terre

48.53 K

Cinque Terre

0

ಸಂಬಂಧಿತ ಸುದ್ದಿ