ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮ ತೀರು ಹೋದಳು ಅಪ್ಪ ಬಿಟ್ಟು ಹೋದ-CBSC ಟಾಪರ್ ಕರುಣಾಜನ ಕಥೆ!

ದೆಹಲಿ: ಮೊನ್ನೆ ಸಿಬಿಎಸ್‌ಸಿ 10 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಯಿತು.ಅದರಲ್ಲಿ 99.4% ಅಂಕ ಪಡೆದ ವಿದ್ಯಾರ್ಥಿಯ ಕಥೆ ನಿಜಕ್ಕೂ ಎಂತವರ ಕಣ್ಣಲ್ಲೂ ನೀರು ತರುತ್ತದೆ. ಆ ಒಂದು ಕಥೆಯನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಈಗ ಬಹಿರಂಗ ಪಡಿಸಿದ್ದಾರೆ.

ಹೌದು. ವರುಣ್ ಗಾಂಧಿ ಈ ಬಾಲಕಿ ಮತ್ತು ಈಕೆಯ ಅಜ್ಜಿಯ ಸಂದರ್ಶನದ ವೀಡಿಯೋವನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ಮೊಮ್ಮಗಳ ಸಾಧನೆಗೆ ಅಜ್ಜಿ ಹರ್ಷ ವ್ಯಕ್ತಪಡಿಸಿದ್ದಾರೆ.

ಆದರೆ, ಮೊಮ್ಮಗಳ ಅಪ್ಪ-ಅಮ್ಮನ ಬಗ್ಗೆ ಕೇಳಿದಾಗ, ಅಜ್ಜಿ ಕರುಳು ಹಿಂಡೋ ಕಥೆ ಹೇಳಿಕೊಂಡಿದ್ದಾರೆ. ಮಗಳ ಮೃತಪಟ್ಟಳು. ಆಗ ಅಳಿಯ ಮೊಮ್ಮಗಳನ್ನ ಬಿಟ್ಟು ಹೊರಟೇ ಹೋಗಿ ಬಿಟ್ಟ. ಅಂದಿನಿಂದ ನಾವು ಅವನನ್ನ ನೋಡಿಯೇ ಇಲ್ಲ. ಆತ ಬೇರೆ ಮದ್ವೆ ಆಗಿದ್ದಾನಂತೆ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.

ಅಜ್ಜಿಯ ಖುಷಿ..ಮೊಮ್ಮಗಳ ಸಾಧನೆ ಎರಡಕ್ಕೂ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

Edited By :
PublicNext

PublicNext

25/07/2022 05:16 pm

Cinque Terre

38.29 K

Cinque Terre

1

ಸಂಬಂಧಿತ ಸುದ್ದಿ