ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ನಾಳೆಯಿಂದ ಪಿಯುಸಿ, ಪದವಿ ತರಗತಿಗಳು ಪುನಾರಂಭ

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್- ಕೇಸರಿ ಶಾಲು ಸಂಘರ್ಷವು ಶಾಲಾ- ಕಾಲೇಜುಗಳಿಂದ ಶುರುವಾಗಿ ಸದ್ಯ ಹೈಕೋರ್ಟ್​ ಅಂಗಳಕ್ಕೆ ತಲುಪಿದೆ. ವಿವಾದದ ಸಂಘರ್ಷವನ್ನು ನಿಯಂತ್ರಿಸಲು ಸರ್ಕಾರವೂ ಸಾರ್ವತ್ರಿಕ ರಜೆ ಘೋಷಣೆ ಮಾಡಿತ್ತು. ಫೆಬ್ರವರಿ 14ರಂದು ಮೊದಲ ಹಂತವಾಗಿ 9-10ನೇ ತರಗತಿಯನ್ನ ಆರಂಭಿಸಲಾಗಿತ್ತು.‌ ಇದೀಗ ನಾಳೆಯಿಂದ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭಿಸಬೇಕು ಎಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದೆ.

'ನಾಳೆಯಿಂದ ಎರಡನೇ ಹಂತವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಪುನಾರಂಭವಾಗಲಿವೆ. ಶಾಲಾ- ಕಾಲೇಜು ಸುತ್ತಲೂ ಪೊಲೀಸ್ ಬಂದೋಬಸ್ತ್ ಜೊತೆಗೆ 144 ಸೆಕ್ಷನ್ ಜಾರಿ ಇರಲಿದೆ. ಶಾಲೆಯ 200 ಮೀಟರ್ ಒಳಗೆ ಮಕ್ಕಳನ್ನ ಹೊರತುಪಡಿಸಿ ‌ಬೇರೆಯವರು ಬರಲು ಅವಕಾಶ ಇಲ್ಲ' ಎಂದು ರಾಜ್ಯ ಸರ್ಕಾರವು ಸುತ್ತೋಲೆಯಲ್ಲಿ ತಿಳಿಸಿದೆ.

ಜೊತೆಗೆ, 'ಪೋಷಕರು ‌ಮಕ್ಕಳನ್ನ ಶಾಲೆಯಲ್ಲಿ ಬಿಟ್ಟು ಹೋಗಬೇಕು. ಅಲ್ಲದೇ ಶಾಲೆಗಳಿಗೆ ಎಸಿ, ಶಿಕ್ಷಣಾಧಿಕಾರಿಗಳು ಭೇಟಿ ನೀಡಬೇಕು. ಯಾವುದೇ ಅಹಿತಕರ ಘಟನೆ ಆಗದಂತೆ ‌ಎಚ್ಚರಿಕೆವಹಿಸಬೇಕು' ಸೂಚಿಸಲಾಗಿದೆ.‌

Edited By : Vijay Kumar
PublicNext

PublicNext

15/02/2022 08:17 pm

Cinque Terre

175.66 K

Cinque Terre

2