ಬೆಂಗಳೂರು: 6ರಿಂದ 8ನೇ ತರಗತಿವರೆಗಿನ ಶಾಲೆಗಳು ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ ಎಂದು ಸಚಿವ ಆರ್. ಅಶೋಕ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, "ಕೋವಿಡ್ ಪಾಸಿಟಿವಿಟಿ ದರ ಶೇಕಡಾಗಿಂತ 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರವಷ್ಟೇ ಶಾಲೆಗಳನ್ನು ಆರಂಭಿಸಲು ನಿರ್ಣಯಿಸಲಾಗಿದೆ. ವಾರದಲ್ಲಿ 5 ದಿನ (ಸೋಮವಾರದಿಂದ ಶುಕ್ರವಾರದವರೆಗೆ) ಶಾಲೆ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಉಳಿದ 2 ದಿನ (ಶನಿವಾರ, ಭಾನುವಾರ) ಶಾಲೆ ಸ್ವಚ್ಛಗೊಳಿಸಲು ಅವಕಾಶವಿರುತ್ತದೆ. ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಅಂದರೆ ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಬಹುದು" ಎಂದು ತಿಳಿಸಿದರು.
ಆದರೆ 1ರಿಂದ 5ನೆ ತರಗತಿಯವರೆಗೆ ಶಾಲೆ ಆರಂಭಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಅಂತಹ ಆಲೋಚನೆಗಳಿಲ್ಲ. 2,913 ಗ್ರಾಮ ಪಂಚಾಯತ್‌ಗಳಲ್ಲಿ ಕೊರೊನಾ ಪಾಸಿಟಿವಿಟಿ ಶೂನ್ಯವಿದೆ. 6,472 ಮಕ್ಕಳ ಕೊವಿಡ್ ಸ್ಯಾಂಪಲ್ಗಳಲ್ಲಿ 12 ಮಕ್ಕಳಲ್ಲಿ ಮಾತ್ರ ಕೊವಿಡ್ ಪಾಸಿಟಿವ್ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.
PublicNext
30/08/2021 06:22 pm