ಬೆಂಗಳೂರು: ಶಾಲೆ ಪುನರಾರಂಭಕ್ಕೆ ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ದು, ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಎಂದು ಸಲಹಾ ಸಮಿತಿ ಸದಸ್ಯ ಮತ್ತು ಹಿರಿಯ ತಜ್ಞ ವೈದ್ಯರಾದ ಡಾ. ಗಿರಿಧರ್ ಬಾಬು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗಿದ್ದು, ಆಗಸ್ಟ್‌ನಲ್ಲಿ ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಮುಂದಾಗಿದೆ. ಇತ್ತ ತಜ್ಞರು ಶಾಲೆ ಓಪನ್ ಮಾಡದಿದ್ದರೆ ತುಂಬಾ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ಹೀಗಾಗಿ ಶಾಲೆಗಳನ್ನು ಆರಂಭಿಸಿದರೆ ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲನೆ ಮಾಡಲೇಬೇಕು ಎಂದು ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.
ನಿಯಮಗಳು ಹೇಗಿರಬೇಕು?
1. ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಬೇಕು.
2. ಶಾಲೆಯ ಆವರಣದಲ್ಲಿ ಮತ್ತು ಕೊಠಡಿಗಳಲ್ಲಿ ಗುಂಪನ್ನು ಕಡಿಮೆ ಮಾಡಬೇಕು.
3. ಯೂನಿವರ್ಸಲ್ ಫೇಸ್ ಮಾಸ್ಕ್ ಬಳಸಬೇಕು.
4. ಜನಸಂದಣಿಯನ್ನು ತಡೆಯಲು ಹೈಬ್ರಿಡ್ ಹಾಜರಾತಿ ಮಾದರಿಗಳನ್ನು ಬಳಸುವುದು.
5. ತರಗತಿ ಕೋಣೆಗಳಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು.
6. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣಕ್ಕಾಗಿ ಆಯ್ಕೆಗಳನ್ನು ಮುಂದುವರಿಸಬೇಕು.
7. ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಪ್ರತ್ಯೇಕಿಸಲು ಸ್ಕ್ರೀನಿಂಗ್ ಪರೀಕ್ಷೆಯನ್ನು ವಿಸ್ತರಿಸುವುದು.
8. ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು.
PublicNext
01/08/2021 06:46 pm