ಪೂರ್ವ ಗೋದಾವರಿ(ಆಂಧ್ರಪ್ರದೇಶ): ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಿ ಉತ್ತಮ ಜ್ಞಾನಾರ್ಜನೆ ಮಾಡಲಿದ್ದಾರೆ ಎಂದು ಪಾಲಕರು ಬಾವಿಸಿರುತ್ತಾರೆ.
ಆದ್ರೆ ಮಕ್ಕಳು ಮಾತ್ರ ಅಪ್ಪ ಅಮ್ಮ ಆಗುವ ಆತುರದಲ್ಲಿ ಮಾಡಬಾರದನ್ನು ಮಾಡತ್ತಾರೆ. ಹೌದು ಮಗ ಮಗಳು ಕಾಲೇಜಿಗೆ ಹೋಗಿದ್ದಾರೆ ಅಂತಾ ತಂದೆ ತಾಯಿ ನಿರಾಳವಾಗಿರತ್ತಾರೆ ಆದ್ರೆ ಕೆಲವು ಮಕ್ಕಳು ಭವಿಷ್ಯದ ವಿಚಾರವನ್ನೇ ಮರೆತು ಎಡವಟ್ಟು ಮಾಡಿಕೊಳ್ಳತ್ತಾರೆ.
ಸದ್ಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನ ಕ್ಲಾಸ್ ರೂಮ್ ನಲ್ಲೇ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ.
ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿತ್ತು. ಅಪ್ರಾಪ್ತ ವಿದ್ಯಾರ್ಥಿಗಳು ವಿವಾಹವಾಗಿರುವ ದೃಶ್ಯ ಸಾಮಾಜಿಕ ತಾಣಾದಲ್ಲಿ ವೈರಲ್ ಆಗಿದೆ.
ಕಾಲೇಜು ಪ್ರಾಂಶುಪಾಲರಿಗೆ ಈ ವಿಷಯ ತಿಳಿಯುತ್ತಲೆ ಇಬ್ಬರಿಗೂ ಟಿಸಿ ನೀಡಿ ಮನೆಗೆ ಕಳಿಸಿದ್ದಾರೆ.
ಇತ್ತ ಈ ವಿವಾಹವಾಗಿರುವ ವಿಷಯ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರಿಗೆ ಸಹ ಆಘಾತವಾಗಿದೆ. ವಿವಾಹ ನೋದಕ್ಕಾಗಿ ನಡೆದಿದೆಯೆ ಅಥವಾ ನಿಜ ಉದ್ದೇಶದಿಂದ ನಡೆಯಿತೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
PublicNext
03/12/2020 02:12 pm