ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶದ ಕಟ್ಟೆಹೊಡೆದಿದೆ. ದೆಹಲಿಯ ಗಾಜಿಪುರ ಅಕ್ಷರ ಸಹ ರಣರಂಗವಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಂದು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವ ರೈತರು ಲಕ್ಷಾಂತರ ಟ್ರ್ಯಾಕ್ಟರ್ ಗಳೊಂದಿಗೆ ಗಣರಾಜ್ಯೋತ್ಸವ ಸಮಾರಂಭ ನಡೆಯುತ್ತಿರುವ ರಾಜಪತ್ ದತ್ತ ಲಗ್ಗೆ ಇಡಲು ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನ ತಡೆದಿದ್ದಾರೆ.
ಈ ವೇಳೆ ಸಿಟ್ಟಿಗೆದ್ದ ರೈತರು ಬ್ಯಾರಿಕೇಡ್ ಮುರಿದು ಒಳನುಗ್ಗಲು ಯತ್ನಿಸಿದ್ದು, ಲಾಠಿಚಾರ್ಜ್ ಮಾಡಲಾಗಿದೆ.
ಪ್ರತಿಭಟನಾಕಾರರು ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಓಡಾಡುತ್ತಿದ್ದು, ದೆಹಲಿಯ ಗಾಜಿಪುರ ರಣರಂಗವಾಗಿದೆ. ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ.
PublicNext
26/01/2021 01:03 pm