ಮಹಿಳಾ ಉದ್ಯಮಿಗಳು ತಮ್ಮ ನವೋದ್ಯಮ ಸ್ಥಾಪನೆಗೆ ( Startups) ಸಂಪನ್ಮೂಲ ಕ್ರೋಢೀಕರಿಸಲು ನೆರವಾಗುವಂತೆ ರಾಜಸ್ತಾನದ ಬನ್ಸಥಾಲಿ ವಿದ್ಯಾಪೀಠದ ಅಟಲ್ ಇನ್ಕುಬೇಶನ್ ಸೆಂಟರ್ ಹಾಗೂ ಎಡಬ್ಲೂಇ ಫಂಡ್ಸ್ ಜಂಟಿ ಸಹಯೋಗದಲ್ಲಿ " WE Invest'' ಸಂಸ್ಥೆ ತರಬೇತಿ ನೀಡಲು ಮುಂದಾಗಿದೆ.
'' WE Invest'' ತರಬೇತಿಯು 13 ವಾರಗಳ ಇಕ್ವಿಟಿ-ಫ್ರೀ ವರ್ಚುವಲ್ ಆಕ್ಸಿಲರೇಶನ್ ಕಾರ್ಯಕ್ರಮವಾಗಿದೆ. ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ನಿರ್ಧರಿಸುವ ಹಾಗೂ ಬೃಹತ್ ಪ್ರಮಾಣದಲ್ಲಿ ಆರ್ಥಿಕತೆಗೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ. ಇದಲ್ಲದೆ ಉದ್ಯಮದಲ್ಲಿ ಹೊಸತನ ನಿರ್ಧರಿಸುವ ಯೋಗ್ಯತೆಯೂ ಅವರಲ್ಲಿರುತ್ತದೆ. ಆದರೂ ಅಂತಿಮವಾಗಿ ಅವರ ಯಶೋಗಾಥೆ ಮುನ್ನಡೆಸಲು ಬಂಡವಾಳ ಮತ್ತು ಪ್ರಭಾವಶಾಲಿ ಸಂಪರ್ಕ ಜಾಲ ಅತ್ಯವಶ್ಯವಾಗಿದೆ. ಈ ಹಿನ್ನೆಯಲ್ಲಿ ತರಬೇತಿ ನೀಡಲಾಗುತ್ತಿದೆ.
ಪ್ರೋಗ್ರಾಂ ಶುಲ್ಕ : 35,000/-
ಅರ್ಜಿ ಸಲ್ಲಿಸುವ ಕೊನೆ ದಿನ : ಸೆಪ್ಟೆಂಬರ್ 30, 2020.
ಅರ್ಹತಾ ಮಾನದಂಡಗಳು
ಮಹಿಳಾ ನೇತೃತ್ವದ ಆದಾಯ ತರುವ ನವೋದ್ಯಮಗಳು
ಭೌಗೋಳಿಕವಾಗಿ ಬಹು ಉದ್ಯಮಗಳನ್ನು ಬೆಳೆಸುವ ಸಾಮರ್ಥ್ಯವಿರುವವರು.
ಪುರುಷ ಸಹ-ಸಂಸ್ಥಾಪಕರನ್ನು ಹೊಂದಿರುವ ಮಹಿಳಾ ನವೋದ್ಯಮಿಗಳು ಸಹ ಅರ್ಜಿ ಸಲ್ಲಿಸಬಹುದು.
ಏಕೆ ಅರ್ಜಿ ಸಲ್ಲಿಸಬೇಕು
*ಹೂಡಿಕೆದಾರರಿಗೆ ಲಭ್ಯವಾಗಿರಲು
* ಹೂಡಿಕೆದಾರರ ಸಂಪೂರ್ಣ ವಿವರ ಪಡೆಯಲು
* ಸಂಪನ್ಮೂಲ ಸಾಮರ್ಥ್ಯದ ಮಾಟ್ರಿಕ್ಸ್ ಪಡೆಯಲು
* ಪರಿಪೂರ್ಣ ಹಾಗೂ ಅಣಕು ಕ್ಷೇತ್ರಗಳ ಆಯ್ಕೆಗಾಗಿ.
* ಸಮಾವೇಶಗಳನ್ನು ಸಂಘಟಿಸುವ ಸಾಮರ್ಥ್ಯ ವೃದ್ಧಿಸುವ ಸಲುವಾಗಿ.
* ಸಂಪನ್ಮೂಲ ಸಂಗ್ರಹಿಸುವ ಮಾರ್ಗ ಕಂಡುಕೊಳ್ಳುವ ಸಲುವಾಗಿ.
ತರಬೇತಿ ಕಾರ್ಯಸೂಚಿ
ಸೆಪ್ಟೆಂಬರ್ 30, 2020 - ನೋಂದಣಿಗೆ ಕೊನೆ ದಿನ.
15 ನೇ ಅಕ್ಟೋಬರ್ 2020 - ಪರಿಣಾಮ ಘೋಷಣೆ
20 ನೇ ಅಕ್ಟೋಬರ್ 2020 - ಕಾರ್ಯಕ್ರಮ ಅನುಷ್ಠಾನ
ಫೆಬ್ರವರಿ 2021 - ಡೆಮೊದೊಂದಿಗೆ ಕಾರ್ಯಕ್ರಮ ಮುಕ್ತಾಯ
ಈಗಲೇ ಅರ್ಜಿ ಸಲ್ಲಿಸಿ, Application Link: https://lnkd.in/dzGGXyW
PublicNext
22/09/2020 10:57 am