ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ನಾಲ್ಕು ದಶಕದ ಬಳಿಕ ಕೋಡಿ ಬಿದ್ದ ಕೆರೆ, ತೆಪ್ಪದಲ್ಲಿ ತೆರಳಿ ಅಡಿಕೆ ಕೊಯ್ಲು...!

ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಆದ ಅವಾಂತರಗಳು ಅಷ್ಟಿಷ್ಟಲ್ಲ. ಅಡಿಕೆ ಬೆಳೆಗಾರರ ಸ್ಥಿತಿ ಹೇಳತೀರದ್ದಾಗಿದೆ.

ಅಣಜಿ ಕೆರೆ ಕೋಡಿ ಬಿದ್ದ ಕಾರಣ ಹಿ‌ನ್ನೀರಿನ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ತೋಟದ ತುಂಬೆಲ್ಲಾ ನೀರು ಆವರಿಸಿದೆ. ಇದರಿಂದ ಅಡಿಕೆ ಕೊಯ್ಲಿಗೆ ತೊಂದರೆಯಾಗಿದೆ.

ಅಡಿಕೆ ಬೆಳೆಗಾರರು ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುವಂತಾಗಿದೆ. ಅಣಜಿ ಕೆರೆಯ ಹಿನ್ನೀರು ಪ್ರದೇಶದಲ್ಲಿ ಬರುವ ಗಿರಿಯಾಪುರ, ಹುಲಿಕಟ್ಟೆ, ಕೆರೆಯಾಗಲಹಳ್ಳಿ ಸೇರಿದಂತೆ 300ಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ತೋಟ, ಮೆಕ್ಕೆಜೋಳ, ರಾಗಿ, ಕುಂಬಳ ಬೆಳೆ ಸೇರಿದಂತೆ ಸಾವಿರಾರು ಎಕರೆ ಬೆಳೆ ಹಾನಿಗೀಡಾಗಿದೆ.

ನೂರು ಎಕರೆ ಅಡಿಕೆ ತೋಟದಲ್ಲಿ ನೀರು ಆವರಿಸಿದ್ದು, ಬೆಳೆ ಕುಸಿತದ ಭೀತಿ ಎದುರಿಸುತ್ತಿದ್ದಾರೆ. ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಅಣಜಿ ಕೆರೆ ತುಂಬಿ ಕೋಡಿ ಬಿದ್ದಿದೆ. ಇದರಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

Edited By :
PublicNext

PublicNext

16/09/2022 02:44 pm

Cinque Terre

23.7 K

Cinque Terre

0