ದಾವಣಗೆರೆ: ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ನಾನು ಸಹ ಮಾಜಿ ಸಿಎಂ ಹಾಗೂ ನನ್ನ ತಂದೆ ಯಡಿಯೂರಪ್ಪರಂತೆ ಆದರ್ಶ ಇಟ್ಟುಕೊಂಡು ರಾಜಕಾರಣ ಮಾಡುತ್ತೇನೆ. ಎಲ್ಲಾ ಜಾತಿ, ವರ್ಗಕ್ಕೆ ನ್ಯಾಯ ಕೊಡುವ ಹಾಗೂ ಧ್ವನಿಯಾಗುವ ಕೆಲಸ ಮಾಡುತ್ತೇನೆ. ತಾಯಂದಿರು ಹಾಗೂ ವಿವಿಧ ಮಠಾಧೀಶರ ಆಶೀರ್ವಾದದಿಂದ 45 ವರ್ಷ ರಾಜಕಾರಣ ಮಾಡಿದರು. ಅವರಂತೆಯೇ ನಾನು ನಡೆಯುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಜಗಳೂರು ಕ್ಷೇತ್ರದ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಚನ್ನಬಸವ ಮಹಾ ಶಿವಯೋಗಿಳರವರ ಸ್ಮರಣತ್ಸೋವ ಹಾಗೂ ಬಸವ ತತ್ವ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರ ಕುರಿತು ಮಾತನಾಡಿದರು. ಜೊತೆಗೆ ಸಾಧನೆಗಳನ್ನು ಮೆಲುಕು ಹಾಕಿದರು. ಯಡಿಯೂರಪ್ಪರ ಮೇಲೆ ತೋರಿದ ಪ್ರೀತಿ, ವಿಶ್ವಾಸ ನನ್ನ ಮೇಲೆ ಇರಲಿ. ತಾಯಂದಿರ ಆಶೀರ್ವಾದ ಇದ್ರೆ ಏನೂ ಬೇಕಾದರೆ ಸಾಧಿಸಬಹುದು ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪರು ಇಂದು ಮುಖ್ಯಮಂತ್ರಿ ಅಲ್ಲ. ಆದ್ರೂ ಕೂಡ ಮೋದಿ ಅವರಿಗೆ ಹೇಗೆ ಚಪ್ಪಾಳೆ ಸಿಗುತ್ತದೆಯೋ ಅದು ಯಡಿಯೂರಪ್ಪರಿಗೂ ಸಿಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಳಿ ಬಂದ ಕರತಾಡನ ಎಲ್ಲರಿಗೂ ಆಶ್ಚರ್ಯ ತಂದಿತು.
ನಾನು ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದ ಯಾವುದೇ ಮೂಲೆಗೆ ಹೋದರೂ ನಮ್ಮ ಯಡಿಯೂರಪ್ಪರ ಮಗ ಬಂದಿದ್ದಾನೆ ಎಂದು ವಿಶೇಷವಾಗಿ ತಾಯಂದಿರು, ಯುವಕರು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ ಎಂದರು.
PublicNext
26/09/2022 08:32 pm