ದಾವಣಗೆರೆ : ಇಂದು ನಡೆದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆ ದಾವಣಗೆರೆಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿನಿ ಬಿ. ಸೃಜನ ಅವರು ಮುಖ್ಯಮಂತ್ರಿಗಳಿಂದ ಗೌರವ ಸನ್ಮಾನಕ್ಕೆ ಪಾತ್ರರಾದರು.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸುವ ಕಾರ್ಯಕ್ರಮಕ್ಕೆ ಗುರುಕುಲ ಶಾಲೆಯ ಸೃಜನ ಬಿ. ಹಾಗೂ ಮಿನಾಲ್ ಇವರಿಬ್ಬರನ್ನು ಆಯ್ಕೆ ಮಾಡಲಾಗಿತ್ತು. ಅಂತೆಯೇ ಇಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಕ್ಕಳ ದಿನಾಚರಣೆಯ ಅಂಗವಾಗಿ ಸನ್ಮಾನ ಮಾಡಿ ಗೌರವಿಸಿದರು.
ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಮಾಡ್ಲಿಂಗ್ ನಲ್ಲಿ ಎರಡನೇ ಸ್ಥಾನ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಫ್ಯಾಷನ್ ಮಾಡೆಲ್ ಸ್ಪರ್ಧೆಯಲ್ಲಿ 13 ಬಾರಿ ಜಯ, 3 ಬಾರಿ ದ್ವಿತೀಯ ಸ್ಥಾನ, 15 ಬಾರಿ ಟೈಟಲ್ ಹೋಲ್ಡರ್ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ 10 ಗೋಲ್ಡ್ ಮೆಡಲ್, 6 ಸಿಲ್ವರ್ ಮೆಡಲ್, 2 ಬ್ರೌನ್ಸ್ ಮೆಡಲ್ ಪಡೆದಿದ್ದಾರೆ. ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲ ಪ್ರಶಸ್ತಿಗಳು ಒಟ್ಟುಗೂಡಿಸಿದರೆ 25 ಗೋಲ್ಡ್ ಮೆಡಲ್, 30 ಸಿಲ್ವರ್ ಮೆಡಲ್, 10 ಬ್ರೌನ್ಸ್ ಮೆಡಲ್ ಗಳ ಪಡೆದು ಉತ್ತಮ ಸಾಧನೆ ಮಾಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ ಈ ವಿದ್ಯಾರ್ಥಿನಿಯ ಸಾಧನೆ ಮತ್ತು ಇದಕ್ಕೆ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದ ಗುರುಕುಲ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಪ್ರಶಂಶಿಸಿದರು.
Kshetra Samachara
14/11/2024 09:56 pm