ದಾವಣಗೆರೆ : ಕಾಂಗ್ರೆಸ್ ಸರ್ಕಾರಕ್ಕೆ ಜನರು 2\3 ಮೆಜಾರಿಟಿ ಕೊಟ್ಟಿದ್ದಾರೆ. ಇವರು 137 ಜನರಿದ್ದು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡೋಕೆ ಸಾಕಷ್ಟು ಅವಕಾಶಗಳಿವೆ ಆದರೆ ಸರ್ಕಾರದಲ್ಲಿ ದಸರಾ, ಗಣೇಶ ದೀಪಾವಳಿ ಹಬ್ಬದಂತೆ ಒಂದೊಂದೆ ಭ್ರಷ್ಟಾಚಾರ ಹಗರಣಗಳು ಹೊರ ಬರುತ್ತಿವೆ ಎಂದು ದಾವಣಗೆರೆಯಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಈ ಗಡಿಬಿಡಿಯಲ್ಲಿ ಅನಕೂಲ, ಅನಾನುಕೂಲ ಇದ್ದರ ಬಿಪಿಎಲ್ ಕಾರ್ಡ್ ರದ್ದು ಮಾಡ್ತಾ ಇದ್ದಾರೆ,ಇವರಿಗೆ ಗ್ಯಾರಂಟಿಯನ್ನ ಪೂರೈಸೋಕೆ ಆಗುತ್ತಿಲ್ಲ.ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೆ ಆಗುತ್ತಿಲ್ಲ,ಅದಕ್ಕೆ ಕಾರ್ಡ್ ಕ್ಯಾನ್ಸಲ್ ಮಾಡಿ ಗ್ಯಾರಂಟಿ ಕೊಡೋ ಕೆಲಸ ಮಾಡ್ತಾ ಇದ್ದಾರೆ ಅಂತಹ ದುಸ್ಥಿಗೆ ಸರ್ಕಾರ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಆಪರೇಶ ಮಾಡಿ ಅಧಿಕಾರಕ್ಕೆ ಬರುವ ಅವಶ್ಯಕಥೆ ಇಲ್ಲ ಅವರ ಮೇಲೆ ಭ್ರಷ್ಟಾಚಾರ, ಕಪ್ಪು ಚುಕ್ಕೆಗಳು ಇದೆ. ಅವರಲ್ಲಿ ಆಂತರಿಕ ರಾಜಕೀಯ ಕಚ್ಚಾಟ ನಡೀತಾ ಇದೆ ಶಾಸಕರು ತಮ್ಮ ಪರ ಇದ್ದಾರೆ. ಸಿದ್ದರಾಮಯ್ಯ ಮುಟ್ಟಿದ್ರೆ ಸರ್ಕಾರ ಉಳಿಯಲ್ಲ ಅನ್ನೋ ಸಂದೇಶ ಡಿಕೆ ಶಿವಕುಮಾರ್ ಗೆ ಕೊಡೊಕೆ ಈ ರೀತಿ ಸುಳ್ಳು ಆರೋಪ ಮಾಡ್ತಾ ಇದ್ದಾರೆ ಎಂದರು.
ವಕ್ಫ ಆಸ್ತಿಯನ್ನ ಯಾರು ನುಂಗಿದ್ದಾರೆ ಅನ್ನೋದು ಅಧಿವೇಶದಲ್ಲಿ ಹೊರ ಬರುತ್ತೆ.ನಮ್ಮ ಸರ್ಕಾದಲ್ಲಿ ಅನ್ವರ್ ಮಾರ್ಪಾಡಿ ಅನ್ನೋರು ತನಿಖೆ ಮಾಡಿದಾರೆ.ಅವರ ಈ ವಿಚಾರದ ಬಗ್ಗೆ ಉತ್ತಮ ತನಿಖೆ ಮಾಡಿದಾರೆ ಸದ್ಯದಲ್ಲೆ ಎಲ್ಲಾ ಹೊರ ಬರುತ್ತೆ ಎಂದರು.
PublicNext
20/11/2024 07:42 am