ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ ಅದ್ದೂರಿಯಾಗಿ ಗಣೇಶ ಮೂರ್ತಿಯನ್ನ ವಿಸರ್ಜನೆ ಮಾಡಲಾಯಿತು. ಸರ್ಕಾರಿ ಶಾಲೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಇಂದಿಗೆ 9ನೇ ದಿನವಾಗಿದ್ದು, ಇಂದು ಗ್ರಾಮದ ತುಂಬೆಲ್ಲಾ ಮೆರವಣಿಗೆ ನಡೆಸಲಾಯಿತು.
ಮಂಗಿಹಾಳ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಡೋಲಿನ ಸದ್ದಿಗೆ ಮತ್ತು ಸಿನಿಮಾ ಹಾಡುಗಳಿಗೆ ಸಖತ್ ಆಗಿ ಲೇಜಿಮ್ ಹಾಗೂ ಕೋಲಾಟ ಹಾಡಿ ನೋಡಗರನ್ನ ಮನರಂಜಿಸಿದರು.
ಅಲ್ಲದೇ ವಿದ್ಯಾರ್ಥಿಗಳು ಸಿಂಹಾದ್ರಿಯ ಸಿಂಹ ಸಿನಿಮಾದ ಡೈಲಾಗ್, ಕಾಮಣ್ಣನ ಮಕ್ಕಳು ಚಿತ್ರದ ಡೈಲಾಗ್ ಹೊಡೆದು ನೋಡುಗರ ಕಣ್ಮನಸೆಳೆದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷರು, ಗಣೇಶ ಮಂಡಳಿಯ ಯುವಕರು ಹಾಗೂ ಗ್ರಾಮಸ್ಥರು ಇದ್ದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
08/09/2022 09:34 pm