ಪಾವಗಡ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ಪಾವಗಡ ಪಟ್ಟಣದ YER ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾವಗಡ ವತಿಯಿಂದ ಕಾಲೇಜಿನಿಂದ ಪಟ್ಟಣದ ಶನಿಮಹಾತ್ಮ ಸರ್ಕಲ್ ವರೆಗೂ ಬೃಹತ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಜಾಥಾಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್ ಶ್ರೀಧರ ಅವರು ಚಾಲನೆ ನೀಡಿ ಮಾತನಾಡಿದ ಅವರು ಭಾರತ ದೇಶದಾದ್ಯಂತ 75ನೇ ಅದ್ದೂರಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅದರಂತೆ ನಮ್ಮ ಕಾಲೇಜಿನಲ್ಲೂ ಸಹ ಇಂದು ಎಲ್ಲಾ ವಿದ್ಯಾರ್ಥಿಗಳು ದೇಶ ಪ್ರೇಮ ಸಾರುವ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ದಾರಿ ಇದ್ದಕ್ಕೂ ದೇಶಭಕ್ತಿ ಸಾರುವಂತ ಘೋಷವಾಕ್ಯಗಳನ್ನು ಕೂಗಿ ದೇಶಪ್ರೇಮವನ್ನು ಸಾರಿದ್ದಾರೆ ಎಂದು ತಿಳಿಸಿದರು.
ಇನ್ನು ದಾರಿ ಉದ್ದಕ್ಕೂ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ಘೋಷ ವಾಕ್ಯಗಳನ್ನು ಕೂಗುತ್ತಾ ಅದ್ದೂರಿಯಾಗಿ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು.
ಇನ್ನೂ ಈ ವೇಳೆ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಎನ್ ಸಿ ಸಿ ಎನ್ಎಸ್ಎಸ್ ಮತ್ತು ಸ್ಕೌಟ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
PublicNext
26/07/2022 09:36 am