ಬೆಂಗಳೂರು: ಧರ್ಮ, ನಂಬಿಕೆ, ಸಾಹಿತ್ಯ, ವಿಜ್ಞಾನ ಹಾಗೂ ವೈಚಾರಿಕತೆ ಬಗ್ಗೆ ಮನುಷ್ಯ ಅಧ್ಯಯನಶೀಲನಾಗಿ ವರ್ತಿಸಬೇಕಿದೆ. ಮನುಷ್ಯ ಸದೃಢನಾಗಬೇಕಾದರೆ ವೈಚಾರಿಕವಾಗಿ ಗಟ್ಟಿಯಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ದುಡಿಯುತ್ತಿದ್ದು, ರಾಜ್ಯಾದ್ಯಂತ ನಿಸ್ವಾರ್ಥವಾಗಿ ದುಡಿಯುತ್ತಾ ಮನುಷ್ಯ ಜೀವನ ಗಟ್ಟಿಗೊಳಿಸೋ ಸೇವೆಗೈದ 52 ಸಾಧಕರನ್ನು ಗುರ್ತಿಸಿ, ಗೌರವಿಸಿದೆ.
ಸಮಾಜದಲ್ಲಿ ಮನುಷ್ಯ ಧಾರ್ಮಿಕ, ಸಾಮಾಜಿಕ, ಆರ್ಥಿಕ ನೆಲೆಗಟ್ಟಿನಲ್ಲಿ ವೈಜ್ಞಾನಿಕತೆ ಮೈಗೂಡಿಸಿ ಬದುಕಬೇಕಿದೆ. ಇಲ್ಲವಾದರೆ ನಂಬಿಕೆಗಳ ಬದಲಿಗೆ ಮೂಢನಂಬಿಕೆಗಳು ಜೀವನವನ್ನು ನಾಶಗೊಳಿಸುತ್ತವೆ. ಆದ್ದರಿಂದ ವೈಜ್ಞಾನಿಕ ಪರಿಷತ್ತು ಮನುಷ್ಯ ಜೀವನ ಸುಧಾರಣೆಗೆ ಶ್ರಮಿಸಿದ ರಾಜ್ಯದ ಮೂಲೆ ಮೂಲೆಗಳ 52 ಸಾಧಕರಿಗೆ ʼಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ನಂಬಿಕೆ- ಮೂಢನಂಬಿಕೆಗಳ ತಿಕ್ಕಾಟ ನಾಗರಿಕರನ್ನು ಅನಾಗರಿಕತೆಯತ್ತ ದೂಡುತ್ತಿದೆ. ಆದರೆ, ಎಲ್ಲೆಲ್ಲಿ ಮೂಢನಂಬಿಕೆಯಿಂದ ಮನುಷ್ಯರಿಗೆ ಕಂಟಕ ಆಗುತ್ತಿದೆಯೋ ಅಲ್ಲಿ ಕರ್ನಾಟಕ ವೈಜ್ಞಾನಿಕ ಪರಿಷತ್ತು ಸತ್ಯಶೋಧನೆ ನಡೆಸುತ್ತಿದೆ.
PublicNext
07/05/2022 10:53 pm