ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹಾವೇರಿ: ಅವರೆಲ್ಲ ಪುಟ್ಟ ಪುಟ್ಟ ಪುಟಾಣಿ ಮಕ್ಕಳು. ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ತೊದಲು ನುಡಿಯಿಂದಲೇ ಹಾಡುವ ಮೂಲಕ ಪುಟ್ಟ ಪುಟ್ಟ ಹೆಜ್ಜೆ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಿಲ್ಲರ್ ಕೊರೊನಾ ಹಾವಳಿ ತಗ್ಗಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಅದರಲ್ಲಿಯೂ ಚಿಣ್ಣರ ಶಾಲೆಯಲ್ಲಂತೂ ಮಕ್ಕಳಿಗೆ ಶಾಲೆ ಆರಂಭವಾಗಿರುವುದು ಹಬ್ಬದ ವಾತಾವರಣವೇ ನಿರ್ಮಾಣವಾದಂತಾಗಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹದೊಂದು ಕಾರ್ಯಕ್ರಮ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಸರಸ್ವತಿ ಪೂಜೆ ನೆರವೇರಿಸಿದ ಮಕ್ಕಳು, ಸಂಜೆ ಹೊತ್ತಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಸಾಂಪ್ರದಾಯಿಕ ನೃತ್ಯ, ಫ್ಯಾಷನ್ ಉಡುಗೆ ತೊಟ್ಟು ಚಲನ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು, ಗ್ರಾಮಸ್ಥರಿಗೆ ಮನರಂಜನೆ ನೀಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
PublicNext
15/03/2022 10:27 pm