ವರದಿ: ಗಣೇಶ್ ಹೆಗಡೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷರಾಗಿ ನಾಡೋಜ ಡಾ.ಮಹೇಶ್ ಜೋಶಿ ಆಯ್ಕೆ ಆಗಿದ್ದಾರೆ.
ಅವರು 46 ಸಾವಿರ ಮತಗಳ ಅಂತರದಿಂದ ಡಾ. ಶೇಖರಗೌಡ ಮಾಲಿ ಪಾಟೀಲ ಅವರನ್ನು ಸೋಲಿಸಿದ್ದಾರೆ.
* ಗಡಿನಾಡು ಜಿಲ್ಲೆಗಳ ಫಲಿತಾಂಶ: ಗಡಿನಾಡು ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೋಡುವುದಾದರೆ ತಮಿಳುನಾಡು ಗಡಿಭಾಗದ ಅಧ್ಯಕ್ಷರಾಗಿ ಕೇವಲ ಒಬ್ಬರೇ ಅಭ್ಯರ್ಥಿ ಇದ್ದು,
ತಮಿಳು ಸೆಲ್ವಿ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದ್ದಾರೆ. ಗೋವಾ ರಾಜ್ಯದ ಗಡಿನಾಡು ಭಾಗದಿಂದ ಯಾವುದೇ ನಾಮಪತ್ರ ಬಾರದಿರುವುದರಿಂದ ಚುನಾವಣೆ ನಡೆದಿಲ್ಲ. ಮಹಾರಾಷ್ಟ್ರದಿಂದ ಸೋಮಶೇಖರ್ ಜಮಶೆಟ್ಟಿ ಗೆದ್ದಿದ್ದಾರೆ. ಕೇರಳದಿಂದ ಸುಬ್ರಹ್ಮಣ್ಯ ವಿ. ಭಟ್, ಆಂಧ್ರಪ್ರದೇಶ ಅಂಜನ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇಂದು ಸಂಜೆ 4 ಗಂಟೆ ವೇಳೆಗೆ ಚುನಾವಣಾಧಿಕಾರಿ ಎಂ. ಗಂಗಾಧರ ಸ್ವಾಮಿ ಅಧಿಕೃತವಾಗಿ ಫಲಿತಾಂಶ ಘೋಷಿಸಿದ್ದಾರೆ. ಬಳಿಕ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು.
ಜೋಶಿ ಅವರಿಗೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಬೆಂಬಲ ಘೋಷಿಸಿದ್ದರು. ಚುನಾವಣೆಗೆ ಮುನ್ನ ಮಂತ್ರಾಲಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದರು.
ಮಹೇಶ್ ಜೋಶಿ ಅವರು ದೂರದರ್ಶನ ಚಂದನ ವಾಹಿನಿ ಅಧಿಕಾರಿಯಾಗಿ 'ಮಧುರ ಮಧುರವೀ ಮಂಜುಳ ಗಾನ...' ಕಾರ್ಯಕ್ರಮದ ಮೂಲಕ ವಾಹಿನಿಯ ಜನಪ್ರಿಯತೆ ಹೆಚ್ಚಿಸಿದ್ದರು.
PublicNext
24/11/2021 08:46 pm