ಹಾಸನಾಂಬೆ ದೇಗುಲದ ಹುಂಡಿಯಲ್ಲಿ ಈ ಬಾರಿಯು ಕಳೆದ ಬಾರಿಯಂತೆ ಕೋಟಿ ಮೊತ್ತದ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ವರ್ಷ ಹಾಸನಾಂಬೆಗೆ ಒಟ್ಟು 1 ಕೋಟಿ 54 ಲಕ್ಷದ 37 ಸಾವಿರದ 94೦ ರೂ ಆದಾಯಗಳಿಕೆಯಾಗಿದ್ದು .ಕಳೆದ ಬಾರಿಗೆ ಹೋಲಿಸಿದರೆ ಇದು ಏನೇನು ಅಲ್ಲ.
28 ಗ್ರಾಂ ಚಿನ್ನ, 459 ಗ್ರಾಂ ಬೆಳ್ಳಿ ಭಕ್ತರಿಂದ ದೇವಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಲಾಗಿದೆ,ನೇರ ದರ್ಶನ ಟಿಕೇಟ್ ಹಾಗು ಲಡ್ಡು ಪ್ರಸಾದ ಮಾರಾಟದಿಂದ 63 ಲಕ್ಷದ 93 ಸಾವಿರದ 815 ರೂ ಸಂಗ್ರಹವಾಗಿದ್ದು, ಹಾಸನಾಂಬೆ ಹುಂಡಿಯಿಂದ 83 ಲಕ್ಷದ 89 ಸಾವಿರದ 770 ರೂ ಸಂಗ್ರಹವಾಗಿದೆ.
ಸಿದ್ದೇಶ್ವರ ದೇವಾಲಯ ಹುಂಡಿಯಿಂದ 6 ಲಕ್ಷದ 50 ಸಾವಿರದ 355 ರೂ ಸೇರಿದಂತೆ ಒಟ್ಟು 1,54,37940ರೂ ಆದಾಯಗಳಿಕೆಯಾಗಿದೆ ಎಂದು ದೇಗುಲದ ಆಡಳಿತ ಅಧಿಕಾರಿ ಹಾಗು ಉಪ ವಿಭಾಗ ಅಧಿಕಾರಿ ಜಗದೀಶ್ ಹೇಳಿಕೆ ಕೊಟ್ಟಿದ್ದಾರೆ.
PublicNext
08/11/2021 06:42 pm