ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಮೇಲೆ ಕನ್ನಡ ಜಾಗೃತಿ: ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಶ್ಲಾಘನೆ

ಬೆಂಗಳೂರು: ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಕನ್ನಡಿಗರಿಗೆ ತನ್ನ ನೆಲಕ್ಕಾಗಿ ಏನಾದರೊಂದು ಸೇವೆ ಮಾಡಬೇಕೆಂದು ಮಹದಾಸೆ ಇದ್ದೇ ಇರುತ್ತೆ. ಕೆಲವರಿಗೆ ಅದು ಸಾಧ್ಯವಾಗುತ್ತೆ. ಇನ್ನು ಕೆಲವರಿಗೆ ಅದು ಸಾಧ್ಯವಾಗೋದಿಲ್ಲ. ಆದ್ರೆ ನಾಗಬಸಯ್ಯ ಎಂಬ ಕನ್ನಡಾಭಿಮಾನಿ ಕನ್ನಡ ಭಾಷೆ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಗಡಿ ಭಾಗದಲ್ಲಿ ಬೈಕ್ ಸಂಚಾರ ಹಮ್ಮಿಕೊಂಡಿದ್ದಾರೆ.

ಇದನ್ನು ಗಮನಿಸಿದ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅದರ ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದಿರುವ ಅವರು "ಹೆದ್ದಾರಿಯಲ್ಲಿ ಸಂಚರಿಸುವಾಗ ನಾಗಬಸಯ್ಯ ಎಂಬ ಕನ್ನಡಪ್ರೇಮಿ ಪರಿಚಯವಾಯಿತು. ಇವರ ವಾಹನವನ್ನು ಕನ್ನಡ ಬಾವುಟ,ಮತ್ತು ವಿಷ್ಣುವರ್ಧನ್ ಅವರ ಚಿತ್ರಗಳಿಂದ ಅಲಂಕಾರ ಮಾಡಿದ್ದರು, ರಾಣಿಬೆನ್ನೂರಿನವರು,ಇವರು ತಮ್ಮ ಸ್ವಂತ ಖರ್ಚಿನಲ್ಲಿ ರಾಜ್ಯದ ಗಡಿಭಾಗಗಳಲ್ಲಿ ಸಂಚಾರ ಮಾಡಿ ಕನ್ನಡ ಭಾಷೆಯ ಬಗ್ಗೆ, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ" ಎಂದು ನಾಗಬಸಯ್ಯ ಅವರ ಕನ್ನಡಪರತೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ

Edited By : Nagesh Gaonkar
PublicNext

PublicNext

05/11/2021 05:18 pm

Cinque Terre

42.27 K

Cinque Terre

1