ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್ ರಾಜಮನೆತನದವರು ರಜಪೂತ ಸಮುದಾಯದ ಮಹಿಳೆಯರ ಶೌರ್ಯವನ್ನು ಪ್ರದರ್ಶಿಸಲು ಐದು ದಿನಗಳ ಕಾರ್ಯಕ್ರಮ ಆಯೋಜಿಸಿದ್ದಾರೆ.
ಈ ಕಾರ್ಯಕ್ರಮದ ಭಾಗವಾಗಿ ರಾಜ್ಕೋಟ್ನಲ್ಲಿ ನಿನ್ನೆ ನಡೆದ 'ತಲ್ವಾರ್ ರಾಸ್' (Sword Raas)ನಲ್ಲಿ ರಜಪೂತ ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿ ಖಡ್ಗ ಕೌಶಲ್ಯವನ್ನು ಪ್ರದರ್ಶಿಸಿದರು. ತಲ್ವಾರ್ ರಾಸ್ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ರಜಪೂತ ಮಹಿಳೆಯರು ಪಾಲ್ಗೊಂಡು ಸಾಂಪ್ರದಾಯಿಕ ಕಲೆ ಪ್ರದರ್ಶಿಸಿ ಹುಬ್ಬೇರಿಸುವಂತೆ ಮಾಡಿದರು.
ಇದೇ ವೇಳೆ ರಾಜ್ಕೋಟ್ನ ರಾಜಮನೆತನದ ರಾಜಕುಮಾರಿ ಕದಂಬರಿ ದೇವಿ 'ತಲ್ವಾರ್ ರಾಸ್'ನ ಇತಿಹಾಸ, ಶಸ್ತ್ರ ಪೂಜೆಯ ಸಂಪ್ರದಾಯ ಮತ್ತು ರಜಪೂತ ಸಮುದಾಯದಲ್ಲಿ ಖಡ್ಗಗಳ ಮಹತ್ವವನ್ನು ವಿವರಿಸಿದರು.
PublicNext
20/10/2021 12:09 pm