ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದಕ್ಕಿಂತ ಹೆಚ್ಚು ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅಸ್ತು..

ಬೆಂಗಳೂರು: ‘ವಾರ್ಡ್ ಗೆ ಒಂದೇ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು, ನಾಲ್ಕು ಅಡಿಗಿಂತ ಎತ್ತರ ಇರಬಾರದು, ಮೂರು ದಿನ ಮಾತ್ರ ಉತ್ಸವ ನಡೆಯಬೇಕು ಎಂಬ ಷರತ್ತುಗಳನ್ನು ವಿಧಿಸುವ ಮೂಲಕ ಹಬ್ಬದ ಆಚರಣೆಗೆ ಅಡ್ಡಿಪಡಿಸಿದ ಸರ್ಕಾರದ ಆದೇಶವನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಕೈಗೊಂಡ ಪ್ರತಿಭಟನೆಗೆ ಸರ್ಕಾರ ಮಣಿದಿದೆ.

ಸದ್ಯ ವಾರ್ಡ್ ವಾರು ಒಂದಕ್ಕಿಂತ ಹೆಚ್ಚು ಗಣೇಶಗಳನ್ನು ಕೋರಿಸಲು ಅವಕಾಶ ನೀಡಿದೆ. ಮಾತ್ರವಲ್ಲದೆ 3 ದಿನಕ್ಕೆ ಸೀಮಿತವಾದ ಆಚರಣೆಯನ್ನು 10 ದಿನಕ್ಕೆ ವಿಸ್ತರಿಸಿದೆ.

ಈ ಕುರಿತು ವಿಶೇಷ ಆಯುಕ್ತ ರಂದೀಪ್ ಪ್ರತಿಕ್ರಿಯಿಸಿ, ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಮಂದಿ ಬೇಡಿಕೆಗಳನ್ನು ಇಟ್ಟಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ವಾರ್ಡ್ ಗಳಲ್ಲಿ ಹೆಚ್ಚುವರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

140 ವಾರ್ಡ್ ಗಳಲ್ಲಿ ಗಣೇಶನನ್ನು ಕೂರಿಸಲು ಅರ್ಜಿ ಬಂದಿದೆ. ಉಳಿದ ಕಡೆ ದೇವಸ್ಥಾನಗಳಲ್ಲಿ ಗಣಪತಿಯನ್ನು ಕೂರಿಸಲಾಗುತ್ತಿದೆ. ರಸ್ತೆ, ಗ್ರೌಂಡ್ಗ ಳಲ್ಲಿ ಬೇಡಿಕೆಗೆ ತಕ್ಕಂತೆ ಗಣೇಶನನ್ನು ಕೂರಿಸಲು ಅವಕಾಶ ನೀಡಲಾಗಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲು ಸರ್ಕಾರದ ಆದೇಶ ಏನಿದೆಯೋ ಅದು ಪಾಲನೆ ಆಗುತ್ತದೆ ಎಂದರು.

Edited By : Nirmala Aralikatti
PublicNext

PublicNext

09/09/2021 04:01 pm

Cinque Terre

29.61 K

Cinque Terre

2