ಚಿತ್ರದುರ್ಗ: 75 ನೇ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ರಾಷ್ಟ್ರಧ್ವಜಾರೊಇಹಣ ನೆರವೇರಿಸಿದರು.
ನಂತರ ಪೋಲಿಸ್, ಎನ್ ಸಿಸಿ, ಸ್ಕೌಟ್ ಮತ್ತು ಗೈಡ್, ಅರಣ್ಯ, ಅಬಕಾರಿ, ಹಾಗೂ ಗೌರವ ವಂದನೆಯನ್ನು ಸ್ವೀಕರಿಸಿದರು. ಇತ್ತ ಹಿರಿಯೂರು ನಗರದಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಕೂಡ ಧ್ವಜಾರೋಹಣ ನೆರವೇರಿಸಿದರು.
ಹಿರಿಯೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿದ ನಂತರ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಅವರು ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದರು. ನಂತರ ಮಾತನಾಡಿದ ಸಚಿವ ಶ್ರೀರಾಮುಲು
ಕೋವಿಡ್ ನ ಮೂರನೇ ಅಲೆ ಬಂದರೆ ಅದನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಅವರು ಪೋಲಿಸ್ ಕವಾಯತು ಮೈದಾನದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು, ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹನಿಯರನ್ನು ನಾವು ನೆನಸಿಕೊಳ್ಳಬೇಕಾಗಿದೆ. ಇನ್ನು ಒಂದು ಕಡೆ ಬರಗಾಲ ಇನ್ನೊಂದು ಕಡೆ ಅತೀವೃಷ್ಟಿ ಅನಾವೃಷ್ಟಿಯನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಇನ್ನು ಕೂಡ ಮೂರನೇ ಅಲೆಯ ಬಗ್ಗೆ ಸಂಭವಿನಯತೆ ಇದೆ ಎಂದು ತಜ್ಞರು ಹಾಗೂ ಬುದ್ದಿ ಜೀವಿಗಳು ಹೇಳುತ್ತಿದ್ದು, ಅದನ್ನು ಕೂಡ ನಾವು ಎಸದುರಿಸಲು ಸನ್ನದ್ಧರಾಗಿದ್ದೆವೆ ಎಂದು ಹೇಳಿದರು.
ಕೋವಿಡ್ ಮೂರನೇ ಅಲೆಯ ಭೀತಿ ಇರುವುದರಿಂದ ಶಾಲಾ ಮಕ್ಕಳನ್ನು ಈ ಬಾರಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿಲ್ಲ.
PublicNext
15/08/2021 09:59 am