ಬಳ್ಳಾರಿ: "ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್''
ಇದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ದೊಡ್ಡ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಗೋರಪ್ಪ ಅಜ್ಜನಿಂದ ಉದುರಿದ ಅಣಿ ಮುತ್ತುಗಳು. ಈ ಬಾರಿ ಒಳ್ಳೆಯದಾಗಲಿದೆ. ಭಾಗ್ಯದ ನದಿ ತುಂಬುತ್ತದೆ ಎಂಬ ಮುನ್ಸೂಚನೆ ನೀಡಿರುವುದರಿಂದ ಒಳ್ಳೆಯ ಮಳೆಯಾಗುತ್ತದೆ ಎಂಬ ಸೂಚನೆ ಸಿಕ್ಕಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಹರಪನಹಳ್ಳಿಯ ಪ್ರಸಿದ್ಧ ಶ್ರದ್ಧಾಭಕ್ತಿ ಕೇಂದ್ರ ದೊಡ್ಡ ಮೈಲಾರಲಿಂಗೇಶ್ವರ ನೆಲೆಸಿರುವ ತಾಣ. ಸ್ವಾತಂತ್ರ್ಯ ಪೂರ್ವದಿಂದಲೂ ಇದೇ ರೀತಿಯ ಹೇಳಿಕೆ ಇಲ್ಲಿಯ ಕಾರ್ಣಿಕೋತ್ಸವದಲ್ಲಿ ಹೇಳಲಾಗುತ್ತಿದೆ. ಇದು ನಿಜವಾಗುತ್ತಲೂ ಇದೆ. ಈ ಹಿನ್ನೆಲೆಯಲ್ಲಿ ಕಾರ್ಣಿಕೋತ್ಸವಕ್ಕೆ ವಿಶಿಷ್ಟ ಮಹತ್ವ ಇದೆ.
ಭಾರತ ಹುಣ್ಣಿಮೆಯ ಮೂರನೇ ದಿನ ಗೋರಪ್ಪ ಅಜ್ಜನಿಂದ ಕಾರ್ಣಿಕ ಕೇಳಲು ಸಾವಿರಾರು ಜನರು ಬರುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆಗಳಿಂದ ಭಕ್ತರು ಆಗಮಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೂ ಸಾವಿರಾರು ಜನರು ಕಾರ್ಣಿಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಕಾರ್ಣಿಕ ಆದ ಮರುದಿನದಿಂದ ಗೋರಪ್ಪರಿಂದ ಪವಾಡಗಳು ನಡೆಯುತ್ತವೆ ಎಂಬ ನಂಬಿಕೆಯೂ ಇದೆ.
PublicNext
27/02/2021 07:20 pm