ಸೂರತ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗಿಸಲು ದೇಶ,ವಿದೇಶಗಳಿಂದಲೂ ದೇಣಿಗೆ ಹರಿದು ಬರುತ್ತತಿದೆ. ಇದರ ಮಧ್ಯೆ ಗುಜರಾತ್ ನ ಸೂರತ್ ನಲ್ಲಿ ಬೇಕರಿವೊಂದು ಬರೋಬ್ಬರಿ 48 ಅಡಿ ಉದ್ದದ ಕೇಕ್ ತಯಾರಿಸಿ ಸಿಹಿ ಸೇವೆ ಮಾಡಿದೆ.
ಹೌದು 'ಬೇಕರಿ ಚೈನ್' ಮಳಿಗೆಯು 48 ಅಡಿ ಉದ್ದದ ಕೇಕ್ ತಯಾರಿಸಿದೆ. ಇದರ ಮೇಲೆ 'ರಾಮ್ ಸೇತು ಕೇಕ್' ಎಂದು ಬರೆಯಲಾಗಿದೆ.
ಸೇತುವೆ ನಿರ್ಮಾಣಕ್ಕೆ ವಾನರ ಸೇನೆಯು ಕಲ್ಲು ಸಾಗಿಸುತ್ತಿರುವ ದೃಶ್ಯವನ್ನು ಕೇಕ್ ಮೇಲೆ ಚಿತ್ರಿಸಲಾಗಿದೆ. ಪ್ರತಿಯೊಂದು ಬಂಡೆಯ ಮೇಲೆ ಶ್ರೀರಾಮ್ ಎಂದು ಬರೆದಿರುವುದನ್ನು ಬಂಡೆ ರೂಪದಲ್ಲಿನ ಕೇಕ್ ನಲ್ಲಿ ಬರೆಯಲಾಗಿದೆ.
ಈ ಕೇಕ್ ಜತೆಗೆ ರಾಮ ಮಂದಿರ ತಯಾರಿಸಿದೆ ಮತ್ತು ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣಕ್ಕಾಗಿ 1,11,111 ರೂ.ದೇಣಿಗೆಯ ಜತೆ ಈ ಕೇಕ್ ಅನ್ನು ನೀಡಲಾಗಿದೆ. 'ರಾಮನ ದೇವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂಬ ಸಂದೇಶವನ್ನು ನಾವು ಕಳುಹಿಸಲು ಬಯಸುತ್ತೇವೆ' ಎಂದು ಬೇಕರಿಯ ನಿರ್ದೇಶಕರು ಹೇಳಿದ್ದಾರೆ.
PublicNext
14/02/2021 07:42 am