ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ದಸರಾ ಮಹೋತ್ಸವ: ಬನ್ನಿ ಮರಕ್ಕೆ ಯದುವೀರ್​ರಿಂದ ಪೂಜೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ದಿನದಂದು ಬನ್ನಿ ಮರಕ್ಕೆ ಮಹಾರಾಜ ಯದುವೀರ್​ರಿಂದ ಪೂಜೆ ನೆರವೇರಿದೆ.

ಅರಮನೆ ಆವರಣದಲ್ಲಿನ ಭುವನೇಶ್ವರಿ ಮಂಟಪದಲ್ಲಿರುವ ಬನ್ನಿ ಮರಕ್ಕೆ ಪೂಜೆ ಮಹಾರಾಜ ಯದುವೀರ್ ಅವರು ಸುಮಾರು 20 ನಿಮಿಷಗಳ ಕಾಲ ಪೂಜೆ ಸಲ್ಲಿಸಿದರು. ಪಟ್ಟದ ಕತ್ತಿ ಸಮೇತ ಬನ್ನಿ ಮಂಟಪಕ್ಕೆ ಬಂದ ಯದುವೀರ್

ಹಿರಿಯ ಪುರೋಹಿತರ ಮಾರ್ಗದರ್ಶನದಲ್ಲಿ ಪೂಜೆ ಮಾಡಿದ್ದಾರೆ. ಬನ್ನಿ ಪೂಜೆ ಮುಖಾಂತರ ವಿಜಯಯಾತ್ರೆ ಮುಕ್ತಾಯವಾಗಿದೆ. ವಿಜಯಯಾತ್ರೆ ಅಂತ್ಯ ಬಳಿಕ ಖಾಸಗಿ ದರ್ಬಾರ್ ಅಂತ್ಯವಾಗಲಿದೆ.

Edited By : Shivu K
PublicNext

PublicNext

15/10/2021 08:31 am

Cinque Terre

54.55 K

Cinque Terre

1