ಗಣೇಶ ಹಬ್ಬಕ್ಕೆ ಮೋದಕ ಇಲ್ಲದೇ ಹಬ್ಬ ಅಸಾಧ್ಯ. ಹಾಗಾಗಿ ಮೋದಕ ಪ್ರಿಯನಿಗೆ ಇಷ್ಟವಾಗು ಮೋದಕ ತಯಾರಿಸುವುದು ಬಲು ಸುಲಭ
ಬೇಕಾಗುವ ಸಾಮಗ್ರಿ 2 ಕಪ್ ಅಕ್ಕಿ ಹಿಟ್ಟು 1 ಕಪ್ ನೀರು 1 ಚಮಚ ತುಪ್ಪ 1/2 ಚಮಚ ಉಪ್ಪು ಮೋದಕ ಒಳಗೆ ತುಂಬಲು 2 ಕಪ್ ತೆಂಗಿನ ತುರಿ 1 ಕಪ್ ಬೆಲ್ಲದ ಪುಡಿ 1 ಚಮಚ ತುಪ್ಪ 1/2 ಚಮಚ ಏಲಕ್ಕಿ.
ತಯಾರಿಸುವ ವಿಧಾನ:
ಕಡಾಯಿಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ. * ಅದಕ್ಕೆ 2 ಕಪ್ ತೆಂಗಿನ ತುರಿ ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಮತ್ತೊಂದು ಪ್ಯಾನ್ ಗೆ 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿ. ಬೆಲ್ಲ ಕರಗಿದ ಮೇಲೆ ಅದಕ್ಕೆ ತೆಂಗಿನ ತುರಿ ಹಾಕಿ ಮಿಶ್ರಣ ಗಟ್ಟಿಯಾದ ಬಳಿಕ ಉರಿ ಆಫ್ ಮಾಡಿ ತೆಗೆದಿಡಿ.
ಒಂದು ಕಡಾಯಲ್ಲಿ 1 ಕಪ್ ನೀರು ಬಿಸಿ ಮಾಡಿ, ಅದರಲ್ಲಿ 1 ಚಮಚ ತುಪ್ಪ, 1/2 ಚಮಚ ಉಪ್ಪು ಹಾಕಿ. ನೀರು ಚೆನ್ನಾಗಿ ಕುದಿಯಲಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ, ಹಿಟ್ಟು ಗಂಟು ಕಟ್ಟದಿರಲು ಸೌಟ್ ನಿಂದ ತಿರುಗಿಸುತ್ತಾ ಇರಿ. ನಂತರ ಉರಿಯಿಂದ ಇಳಿಸಿ 5 ನಿಮಿಷ ತಣ್ಣಗಾಗಲು ಇಡಿ.
ಮೊದಲಿಗೆ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ ಕೈಯಲ್ಲಿ ತಟ್ಟಿ, ಮಧ್ಯದಲ್ಲಿ ತೆಂಗಿನಕಾಯಿ ಮಿಶ್ರಣ ಹಾಕಿ ಅದರ ತುದಿ ಕ್ಲೋಸ್ ಮಾಡಿ. ನಂತರ ಬಾಳೆ ಎಲೆ ಮೇಲೆ ಮೋದಕಗಳನ್ನು ಇಟ್ಟು ಹಬೆಯಲ್ಲಿ 10-15 ನಿಮಿಷ ಬೇಯಿಸಿ.
PublicNext
09/09/2021 12:36 pm