ಅಥಣಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕೃಷ್ಣಾ ನದಿಯಲ್ಲಿ ಯುವಕರು ಬೋಟನಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಸಂಚರಿಸಿ ಅಭಿಮಾನವನ್ನು ಮೆರೆದಿದ್ದಾರೆ.
ಕೃಷ್ಣಾನದಿಯಲ್ಲಿ ಬೋಟನಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಭಾರತ ಮಾತಾ ಕೀ ಜೈ,ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ತಮ್ಮಲ್ಲಿರುವ ರಾಷ್ಟ್ರಾಭಿಮಾನವನ್ನು ತೋರಿಸಿದ್ದಾರೆ.
ನದಿಯ ಉದ್ದಕ್ಕೂ ಸಂಚರಿಸಿದ್ದಾರೆ. ನಿವೃತ್ತ ಸಿಬಿಐ ಅಧಿಕಾರಿ ಶಿವಾಜಿ ಶಿಂಗಾಡೆ, ಪಿಕೆಪಿಎಸ್ ಸದಸ್ಯ ಸಚೀನ ಪಾಟೀಲ, ಸಂತೋಷ ಗುರವ, ಬಸವರಾಜ ಅಮ್ಮಣಗಿ, ಬಸವರಾಜ ಪೂಜಾರಿ, ಅಡವಯ್ಯ ಅರಳಿಕಟ್ಟಿಮಠ, ಸ್ವಪ್ನಿಲ್ ದಿವಟೆ, ರವಿ ಜಡೆ, ಅಮೀತ ಪುಠಾಣೆ, ಸಂಜು ವಾಳಕೆ, ಸೇರಿದಂತೆ ಇನ್ನಿತರ ಯುವಕರು ಇದ್ದರು.
ವರದಿ : ಸಂತೋಷ ಬಡಕಂಬಿ
PublicNext
14/08/2022 11:24 am