ನವದೆಹಲಿ: ಭಾರತದ ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆಯೂ ಆವರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ದ್ವೀಪ ಪ್ರದೇಶಗಳಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಲಡಾಖ್ ಗಡಿಯಲ್ಲಿ ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್ನ (ಐಟಿಬಿಪಿ) ಹಿಮವೀರ್ ತಂಡವು ಸುಮಾರು 15 ಸಾವಿರ ಅಡಿಯಷ್ಟು ಎತ್ತರದಲ್ಲಿ -35 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ನಡುವೆ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ.
ಕೊರೆಯುವ ಚಳಿಯಲ್ಲಿಯೂ ತ್ರಿವರ್ಣ ಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಪರೇಡ್ ನಡೆಸಿರುವುದು ಮೈ ನವಿರೇಳಿಸುವಂತಿದೆ. ಇದರ ಜೊತೆಗೆ ಐಟಿಬಿಪಿ ಹಮ್ ಹಿಂದೂಸ್ತಾನಿ ಹೇ.. ಸೈನಿಕ್ ತೂಫಾನಿ ಹೇ (ನಾವು ಭಾರತೀಯರು, ಸೈನಿಕರು ಬಿರುಗಾಳಿ) ಎಂಬ ಹಾಡನ್ನು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಿದೆ.
PublicNext
26/01/2022 09:17 am